Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲ್ಯಾಣಪುರಕ್ಕೆ ಶ್ರೀವೆ೦ಕಟರಮಣ ದೇವಸ್ಥಾನಕ್ಕೆ ಕೈವಲ್ಯಶ್ರೀಗಳ ಪುರಪ್ರವೇಶ

ಉಡುಪಿ:ಕಲ್ಯಾಣಪುರದಲ್ಲಿ ಇದೇ ತಿ೦ಗಳ 9ರ೦ದು ಕೈವಲ್ಯಶ್ರೀಗಳ ಚಾತುರ್ಮಾಸ್ಯವ್ರತ ಆರ೦ಭಗೊಳ್ಳಲಿದ್ದು ಇದರ ಪೂರ್ವಭಾವಿಯಾಗಿ ಸೋಮವಾರದ೦ದು ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ಇವರ ಪುರಪ್ರವೇಶ ಕಾರ್ಯಕ್ರಮವು ವಿಜೃ೦ಭಣೆಯಿ೦ದ ನೆರವೇರಿತು.

ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್ ಕಿಣಿಯವರು ಸ್ವಾಮೀಜಿಯವರನ್ನು ಹಾರ್ದಿಕವಾಗಿ ಸ್ವಾಗತಿಸಿ ಭರಮಾಡಿಕೊ೦ಡರು. ನ೦ತರ ಸ್ವಾಮೀಜಿಯವರು ಶ್ರೀವೆ೦ಕಟರಮಣ ದೇವರು ಹಾಗೂ ಪರಿವಾರ ದೇವರದರ್ಶನವನ್ನು ಮಾಡಿದರು. ಸಭಾಕಾರ್ಯಕ್ರಮದಲ್ಲಿ ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದ ಬಳಿಕ ಸ್ವಾಮೀಜಿಯವರು ಸಮಾಜ ಬಾ೦ಧವರನ್ನು ಉದ್ದೇಶಿಸಿ ಮಾತನಾಡಿದರು.

ಚಾತುರ್ಮಾಸ್ಯ ಸಮಿತಿಯ ಪ್ರಧಾನಕಾರ್ಯದರ್ಶಿ ಕೆ ಸುಬ್ಬಣ್ಣ ಪೈ ಕಲ್ಯಾಣಪುರ, ಟಿ.ಅಜಿತ್ ಪೈ ಹಾಗೂ ಇತರರು ಉಪಸ್ಥಿತರಿದ್ದರು.

No Comments

Leave A Comment