Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ರಮ್ಯಾ ಮೋಹಕ ತಾರೆ ಶುಭಾ ಮೋದಕ ತಾರೆ!

ರಮ್ಯಾಗೆ ಮೋಹಕ ತಾರೆ ಎಂಬ ಬಿರುದಿರುವುದು ಎಲ್ಲರಿಗೂ ಗೊತ್ತಿದೆ. ಆಕೆ ಮೋಹಕ ನಗೆ ಬೀರುವುದರಿಂದ ಮೋಹಕ ತಾರೆ ಎಂಬ ಬಿರುದನ್ನು ಅವರ ಅಭಿಮಾನಿಗಳು ಕೊಟ್ಟಿದ್ದಾರೆ. ಆದರೆ, ಮೋದಕ ತಾರೆ ಎಂಬ ಬಿರುದು ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಕೇಳಿ. ಅಂಥದ್ದೊಂದು ಬಿರುದನ್ನು ಇದೀಗ ಶುಭಾ ಪೂಂಜಾ ಅವರಿಗೆ ನೀಡಲಾಗಿದೆ.

ಮೋಹಕ ತಾರೆಯೇನೋ ಓಕೆ, ಮೋದಕ ತಾರೆಯೆಂದರೇನು? ಎಂಬ ಪ್ರಶ್ನೆ ಸಹಜ. ಮೋದಕದಷ್ಟೇ ಸಿಹಿಯಾದ ಎಂಬ ಉತ್ತರ ನೀಡುತ್ತಾರೆ ನಿರ್ದೇಶಕ ಮಾಗಡಿ ಪಾಂಡು. ನಿನ್ನೆಯಷ್ಟೇ “ನರಗುಂದದ ಬಂಡಾಯ’ ಎಂಬ ಚಿತ್ರವನ್ನು ಅವರು ನಿರ್ದೇಶಿಸುತ್ತಿರುವುದು ಮತ್ತು ಅದರಲ್ಲಿ ಶುಭ ನಟಿಸುತ್ತಿರುವ ಬಗ್ಗೆ ಓದಿರಬಹುದು. ಆ ಚಿತ್ರದಲ್ಲಿ ಶುಭಾಗೆ ಮೋದಕ ತಾರೆ ಎಂಬ ಬಿರುದು ಕೊಟ್ಟಿದ್ದಾರೆ ನಾಗೇಂದ್ರ ಮಾಗಡಿ.

“ನರಗುಂದ ಬಂಡಾಯ’ ಚಿತ್ರದಲ್ಲಿ ರಕ್ಷಿತ್‌ ಎದುರು ಶುಭಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಸುಮಾರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಇತ್ತೀಚೆಗೆ ಶುಭಾ ಅವರ ಫೋಟೋಶೂಟ್‌ ಸಹ ಆಗಿದೆ

 

No Comments

Leave A Comment