Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಗಂಭೀರ ಗಾಯ

ಶ್ರೀನಗರ : ದಕ್ಷಿಣ ಕಾಶ್ಮೀರದ ಅನಂತನಾಗ್‌ ಪಟ್ಟಣದಲ್ಲಿ ಇಂದು ಸೋಮವಾರ ಉಗ್ರರು ಗುಂಡು ಹಾರಿಸಿ ಓರ್ವ ಪೊಲೀಸ್‌ ಸಿಬಂದಿಯನ್ನು ಗಂಭೀರವಾಗಿ ಗಾಯಗೊಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ.

ಅನಂತ್‌ನಾಗ್‌ ಬಸ್‌ ನಿಲ್ದಾಣದಲ್ಲಿ ಕಾನ್‌ಸ್ಟೆಬಲ್‌ ಗುಲಾಮ್‌ ಹಸನ್‌ ಅವರ ಮೇಲೆ ಉಗ್ರರು ಅತ್ಯಂತ ಸನಿಹದಿಂದ ಗುಂಡು ಹಾರಿಸಿದರು. ಗುಂಡು ಅವರ ಕುತ್ತಿಗೆಗೆ ತಾಗಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು.

ಒಡನೆಯೇ ಹಸನ್‌ ಅವರನ್ನು ಅನಂತ್‌ನಾಗ್‌ ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಯಿತು. ಅವರ ಸ್ಥಿತಿ ತೀರ ಗಂಭೀರ ಇರುವುದನ್ನು ಲೆಕ್ಕಿಸಿ ಅವರನ್ನು ಸೇನೆಯ 92 ಬೇಸ್‌ ಹಾಸ್ಪಿಟಲ್‌ಗೆ ಸಾಗಿಸಲಾಯಿತು.

ಉಗ್ರರ ದಾಳಿಯ ವೇಳೆ ಹಸನ್‌ ಅವರು ನಿರಸ್ತ್ರರಾಗಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

No Comments

Leave A Comment