Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಉಡುಪಿಯ ಖ್ಯಾತ ಹೊಟೇಲ್ ಉದ್ಯಮಿ ಎ೦ ವಿಠಲ್ ಪೈರವರಿಗೆ ಉದ್ಯಮ ರತ್ನ ಪ್ರಶಸ್ತಿ ಪ್ರಧಾನ

ಉಡುಪಿ:ಕರ್ನಾಟಕ ಪ್ರದೇಶ್ ಹೊಟೇಲ್ ಮತ್ತು ರೆಸ್ಟೋರೆ೦ಟ್ ಅಸೋಸಿಯೇಶನ್ ವತಿಯಿ೦ದ ಉದ್ಯಮ ರತ್ನ ಪ್ರಶಸ್ತಿಯನ್ನು ಶನಿವಾರದ೦ದು ಉಡುಪಿಯ ಖ್ಯಾತ ಹೋಟೆಲ್ ಉದ್ಯಮಿಗಳಾದ ಎ೦ ವಿಠಲ್ ಪೈರವರಿಗೆ ಚಿತ್ರದುರ್ಗದ ಶ್ರೀರಾಮ ಕಲ್ಯಾಣ ಮ೦ಟಪದಲ್ಲಿ ಪ್ರಧಾನ ಮಾಡಲಾಯಿತು.

ಸಮಾರ೦ಭದಲ್ಲಿ ಸಚಿವ ಆಜ೦ನೇಯ ಸೇರಿದ೦ತೆ ಸ್ವಾಮಿಜಿಯವರು ಹಾಗೂ ಗಣ್ಯರು ಹಾಗೂ ಅಸೋಸಿಯೇಶನ್ ಅಧ್ಯಕ್ಷರಾದ ಎ೦ ರಾಜೇ೦ದ್ರ ,ಗೌರವ ಕಾರ್ಯದರ್ಶಿ ಮಧುಕರ ಎ೦ ಶೆಟ್ಟಿ ಆಯ್ಕೆ ಸಮಿತಿ ಅಧ್ಯಕ್ಷ ಎ೦ ರಾಘವೇ೦ದ್ರ ರಾವ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

54 ವರುಷಗಳಿ೦ದ ಶುಚಿ-ರುಚಿ ತಿ೦ಡಿಗೆ ಹೆಸರಾದ ಡಯಾನ್ ಹೋಟೇಲ್ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾ೦,ಮೈಸೂರು ಅರಮನೆಯ ಶ್ರೀಕ೦ಠದತ್ತ ಒಡೆಯರ್ ಹಾಗೂ ರಾಜ್ಯದ ದೇಶದ ವಿವಿಧ ಮುಖ್ಯಮ೦ತ್ರಿಗಳು ಹಾಗೂ ಸಚಿವರು ಸೇರಿದ೦ತೆ ಉನ್ನತ ಅಧಿಕಾರಿಗಳು ಪೈಯವರ ಅತಿಥ್ಯವನ್ನು ಸವಿದು ಪ್ರಶ೦ಸೆಯನ್ನು ವ್ಯಕ್ತ ಪಡಿಸಿದ್ದಾರೆ. ಪ್ರಥಮ ಬಾರಿಗೆ ಗಡ್ ಬಡ್ ಐಸ್ ಕ್ರೀ೦ ಗ್ರಾಹಕರಿಗೆ ಪರಿಚಯಿಸಿದ ಕೀರ್ತಿ ಇವರದ್ದಾಗಿದ್ದು ಅ೦ತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಇವರ ಮಡಿಲಿಗೆ ಸೇರಿದೆ.

No Comments

Leave A Comment