Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಐಸಿಸ್‌ ಸೇರಿದ್ದ ಕೇರಳದ ಐವರು ಸಿರಿಯಾದಲ್ಲಿ ಸಾವು

ಕಲ್ಲಿಕೋಟೆ: ಐಸಿಸ್‌ ಉಗ್ರ ಸಂಘ ಟನೆಗೆ ಸೇರ್ಪಡೆಯಾದ ಕೇರಳದ ಐವರು ಯುವಕರು ಸಿರಿಯಾದಲ್ಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ಕೇರಳದ ಒಟ್ಟು 10 ಮಂದಿ ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದಂತಾಗಿದೆ ಎಂದು ಕೇರಳ ಗುಪ್ತಚರ ಸಂಸ್ಥೆ ತಿಳಿಸಿದೆ.

ಪಾಲಕ್ಕಾಡ್‌ ಜಿಲ್ಲೆಯ ಕಾಂಜಿಕೋಡ್‌ನ‌ ಸಿಬಿ ಎಂಬ ಯುವಕ ಕೆಲವು ದಿನಗಳ ಹಿಂದಷ್ಟೇ ಮೃತಪಟ್ಟಿದ್ದಾಗಿ ಮಾಹಿತಿ ಬಂದಿದೆ ಎಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಿರಿಯಾಗೆ ಹೋಗಿ ಐಸಿಸ್‌ ಸೇರ್ಪಡೆಯಾಗುವ ಮೊದಲು ಸಿಬಿ ಬಹ್ರೈನ್‌ನಲ್ಲಿ ಕೆಲಸ ಮಾಡು ತ್ತಿದ್ದ. ಇದೇ ರೀತಿ ಮಲಪ್ಪುರಂ ಜಿಲ್ಲೆಯ ವನಿಯಂಬಳಂ ನಿವಾಸಿ ಮುಹದ್ದಿಸ್‌ ಕೂಡ ಸಿರಿಯಾದ ಅಲೆಪ್ಪೋದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಬಹ್ರೈನ್‌ನಲ್ಲಿರುವ ಈತನ ಸಹೋದರ ಇತ್ತೀಚೆಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿ ಸಾವಿನ ವಿಚಾರ ತಿಳಿಸಿದ್ದ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಪಾಲಕ್ಕಾಡ್‌ನ‌ ಅಬು ತಾಹಿರ್‌ ಎಂಬಾತನೂ ಅಮೆರಿಕದ ವೈಮಾನಿಕ ದಾಳಿಗೆ ಬಲಿಯಾಗಿದ್ದ. ಸಾವಿಗೀಡಾದ ಇನ್ನಿಬ್ಬರು ಉಗ್ರರ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿಲ್ಲ.

ಈ ಯುವಕರು ಮೃತಪಟ್ಟಿರುವ ವಿಚಾರ ಆಯಾಯ ಕುಟುಂಬ ಸದಸ್ಯರಿಗೆ ತಲುಪಿದೆಯೇ ವಿನಾ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹಾಗಾಗಿ ಇವರ ಸಾವಿನ ಬಗ್ಗೆ ಈಗಲೇ ದೃಢಪಡಿಸಲು ಆಗದು ಎಂದೂ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ಆಫ‌^ನ್‌ಗೆ ತೆರಳಿರುವ 21 ಮಂದಿ ಸದಸ್ಯರ ಗುಂಪು ನೇರವಾಗಿ ಇಸ್ಲಾಮಿಕ್‌ ಸ್ಟೇಟ್‌ನ ಹೋರಾಟದಲ್ಲಿ ಭಾಗಿಯಾಗಿಲ್ಲ. ಬದಲಿಗೆ ಐಸಿಸ್‌ ಉಗ್ರ ಸಂಘಟನೆಗೆ ಬೇಕಾದ ನೆರವನ್ನು, ಪ್ರಚಾರವನ್ನು ಹಾಗೂ ಯುವಕರ ನೇಮಕದ ಕೆಲಸವನ್ನು ಮಾಡುತ್ತಿತ್ತು. ಇತ್ತೀಚೆಗೆ ಅಮೆರಿಕ ಆಫ‌^ನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಗೆ ಈ ಪೈಕಿ ಕೆಲವರು ಬಲಿಯಾಗಿದ್ದರು. ಇನ್ನು ಸಿರಿಯಾಗೆ ತೆರಳಿರುವ ಭಾರತೀಯರು ಮಾತ್ರ ಸಂಘರ್ಷಪೀಡಿತ ಪ್ರದೇಶದಲ್ಲಿ ಐಸಿಸ್‌ನ ಸಕ್ರಿಯ ಸದಸ್ಯರಾಗಿ ಹೋರಾಡುತ್ತಾ, ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment