Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಬಂಟ್ವಾಳ ಎಸ್‌ಡಿಪಿಐ ಮುಖಂಡನ ಹತ್ಯೆ : ಪ್ರಮುಖ ಆರೋಪಿ ಭರತ್‌ ಸೆರೆ

ಬಂಟ್ವಾಳ: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ  ಮಹಮ್ಮದ್‌ ಅಶ್ರಫ್‌ ಹತ್ಯೆ ಪ್ರಕರಣದ ಮಾಸ್ಟರ್‌ ಮೈಂಡ್‌ ತಲೆ ಮರೆಸಿಕೊಂಡಿದ್ದ  ಭರತ್‌ ಕುಮ್ಡೇಲ್‌ನನ್ನು  ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು. ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಭರತ್‌ ಭಜರಂಗದಳದ ಪುತ್ತೂರು ವಲಯದ ಸಂಚಾಲಕನಾಗಿದ್ದ.

ನಿಷೇಧಾಜ್ಞೆ ಇದ್ದ ವೇಳೆಯಲ್ಲೆ ಹತ್ಯೆ ನಡೆದು ವಾತಾವರಣ ಇನ್ನಷ್ಟು ಉದ್ವಿಗ್ನ ಗೊಂಡಿತ್ತು. ಜುಲೈ 2 ರ ವರಗೆ  ಬಂಟ್ವಾಳ ಸೇರಿದಂತೆ ಜಿಲ್ಲೆಯ 4 ತಾಲೂಕುಗಳಲ್ಲಿ ನಿಷೇಧಾಜ್ಞೆ ಮುಂದುವರೆದಿದೆ.

ಕಲಾಯಿ ನಿವಾಸಿಯಾಗಿದ್ದ  ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ರರನ್ನು ದುಷ್ಕರ್ಮಿಗಳು ಬೆಂಜನಪದವು ಕರಾವಳಿ ಸೈಟ್‌ ರಾಮನಗರ ಸಮೀಪ ಜೂನ್‌ 21 ರಂದು  ಹಾಡಹಗಲೆ ತಲವಾರಿನಿಂದ ಕಡಿದು ಹತ್ಯೆಗೈದಿದ್ದರು.

No Comments

Leave A Comment