Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಕಾಶೀ ಮಠಾಧೀಶರ ಭೇಟಿ

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಗುರುವಾರದ೦ದು ಶ್ರೀಕಾಶೀ ಮಠಾಧೀಶರಾದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಆಗಮಿಸಿದ್ದು ಶ್ರೀಗಳನ್ನು ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಸಮಾಜ ಬಾ೦ಧವರು ಆತ್ಮೀಯವಾಗಿ ಬರಮಾಡಿಕೊ೦ಡರು.

ಶ್ರೀಗಳವರು ದೇವಸ್ಥಾನದ ಶ್ರೀವೆ೦ಕಟೇಶ ದೇವರ ದರ್ಶನಮಾಡಿ ನ೦ತರ ನಡೆದ ಸಭಾಕಾರ್ಯಕ್ರಮದಲ್ಲಿ ಪಾದ ಪೂಜೆಯನ್ನು ಸ್ವೀಕರಿಸಿ ಸಮಾಜಬಾ೦ಧವರನ್ನು ಉದ್ದೇಶಿಸಿ ಮಾತನಾಡಿ ಆಶೀರ್ವಚನ ನೀಡಿದರು.

ಉಡುಪಿಯಲ್ಲಿ ಮೊಕ್ಕಾ೦ ಹೂಡಿದ ಇವರು ಸ್ಥಳೀಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಹಾಗೂ ಉದ್ಯಾವರಗಳಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

No Comments

Leave A Comment