Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅದಿರು ಲಾರಿ ಢಿಕ್ಕಿಯಾಗಿ ಕಾರು ಜಖಂ: ಬಳ್ಳಾರಿ IGP ಮುರುಗನ್‌ ಪಾರು

ಬಳ್ಳಾರಿ : ಇಲ್ಲಿನ ಕುಡಿತಿನಿ ಬಳಿ ಗುರುವಾರ ತಡರಾತ್ರಿ ಲಾರಿಯೊಂದು ಐಜಿಪಿ ಕಾರಿಗೆ ಢಿಕ್ಕಿಯಾಗಿದ್ದು, ಅದೃಷ್ಟವಷಾತ್‌ ಐಜಿಪಿ ಎಸ್‌.ಮುರುಗನ್‌ ಅವರು ಪಾರಾಗಿದ್ದಾರೆ.

ಐಜಿಪಿ ಮುರುಗನ್‌ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅದಿರು ಲಾರಿ ಢಿಕ್ಕಿ ಯಾದ ಪರಿಣಾಮ ಕಾರು ಜಖಂಗೊಂಡಿದೆ ಎಂದು ವರದಿಯಾಗಿದೆ.

ಅಪಘಾತವಾದೊಡನೆಯೇ ಚಾಲಕ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಈ ಬಗ್ಗೆ ಕುಡಿತಿನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

No Comments

Leave A Comment