Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ನಗರಸಭೆ ಸಾಮಾನ್ಯ ಸಭೆಗೆ ಬಂದ ವ್ಯಕ್ತಿಗೆ ಕೈ ಸದಸ್ಯರಿಂದ ಥಳಿತ

ಉಡುಪಿ :ಇಲ್ಲಿ ಗುರುವಾರ ನಡೆಯುತ್ತಿದ್ದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನ ಸದಸ್ಯರು ಸಭೆಗೆ ಬಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಘಟನೆ ಏನು?
ಕಡಿಯಾಳಿ ವಾರ್ಡ್‌ ಸದಸ್ಯೆ ಗೀತಾ ಶೇಟ್‌ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸಿ, ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರ ಕಾರ್ಯವೈಖರಿಯನ್ನು ಸಮರ್ಥಿಸಲು ಸಭೆಗೆ ಬಂದ ರೋನಿ ಡಿ’ಮೆಲ್ಲೊ ಎಂಬ ವ್ಯಕ್ತಿಯ ಮೇಲೆ ಒಮ್ಮೆಲೆ ಎರಗಿದ ಹತ್ತಾರು ಸದಸ್ಯರು ಕಾಂಗ್ರೆಸ್‌ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಲ್ಲಿ ಹೊರಗಿನವರಿಗೆ ಮಾತನಾಡಲು ಅವಕಾಶವಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ರೋನಿ ಅವರನ್ನು ಥಳಿಸಿ,ಎಳೆದಾಡಿ ಹೊರ ಹಾಕಲು ಯತ್ನಿಸಿದ್ದಾರೆ.

ಇದೀಗ ಥಳಿತಕ್ಕೊಳಗಾಗಿರುವ ರೋನಿ ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಮಾಜಿ ಬಿಜೆಪಿ ಶಾಸಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ನಡೆದ ಬಳಿಕ ನಗರಸಭೆಗೆ ಪೊಲೀಸರು ಭೇಟಿ ನೀಡಿದ್ದಾರೆ.

No Comments

Leave A Comment