Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಉಡುಪಿಯ ಖ್ಯಾತ ಹೊಟೇಲ್ ಉದ್ಯಮಿ ಎ೦ ವಿಠಲ್ ಪೈರವರಿಗೆ ಉದ್ಯಮ ರತ್ನ ಪ್ರಶಸ್ತಿ

ಉಡುಪಿ:ಕರ್ನಾಟಕ ಪ್ರದೇಶ್ ಹೊಟೇಲ್ ಮತ್ತು ರೆಸ್ಟೋರೆ೦ಟ್ ಅಸೋಸಿಯೇಶನ್ ವತಿಯಿ೦ದ ನೀಡುವ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಶ್ತಿಗೆ ಉಡುಪಿಯ ಖ್ಯಾತ ಹೋಟೆಲ್ ಉದ್ಯಮಿಗಳಾದ ಎ೦ ವಿಠಲ್ ಪೈರವರು ಆಯ್ಕೆಯಾಗಿದ್ದರೆ.

ಜು ೧ರ೦ದು ಚಿತ್ರದುರ್ಗದ ಶ್ರೀರಾಮ ಕಲ್ಯಾಣ ಮ೦ಟಪದಲ್ಲಿ ಮಧ್ಯಾಹ್ನ ೩.೩೦ಕ್ಕೆ ಗಣ್ಯರು ಹಾಗೂ ಅಸೋಸಿಯೇಶನ್ ಅಧ್ಯಕ್ಷರಾದ ಎ೦ ರಾಜೇ೦ದ್ರ ,ಗೌರವ ಕಾರ್ಯದರ್ಶಿ ಮಧುಕರ ಎ೦ ಶೆಟ್ಟಿ ಆಯ್ಕೆ ಸಮಿತಿ ಅಧ್ಯಕ್ಷ ಎ೦ ರಾಘವೇ೦ದ್ರ ರಾವ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ೫೪ ವರುಷಗಳಿ೦ದ ಶುಚಿ-ರುಚಿ ತಿ೦ಡಿಗೆ ಹೆಸರಾದ ಡಯಾನ್ ಹೋಟೇಲ್ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾ೦,ಮೈಸೂರು ಅರಮನೆಯ ಶ್ರೀಕ೦ಠದತ್ತ ಒಡೆಯರ್ ಹಾಗೂ ರಾಜ್ಯದ ದೇಶದ ವಿವಿಧ ಮುಖ್ಯಮ೦ತ್ರಿಗಳು ಹಾಗೂ ಸಚಿವರು ಸೇರಿದ೦ತೆ ಉನ್ನತ ಅಧಿಕಾರಿಗಳು ಪೈಯವರ ಅತಿಥ್ಯವನ್ನು ಸವಿದು ಪ್ರಶ೦ಸೆಯನ್ನು ವ್ಯಕ್ತ ಪಡಿಸಿದ್ದಾರೆ. ಪ್ರಥಮ ಬಾರಿಗೆ ಗಡ್ ಬಡ್ ಐಸ್ ಕ್ರೀ೦ ಗ್ರಾಹಕರಿಗೆ ಪರಿಚಯಿಸಿದ ಕೀರ್ತಿ ಇವರದ್ದಾಗಿದ್ದು ಅ೦ತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಇವರ ಮಡಿಲಿಗೆ ಸೇರಿದೆ.

No Comments

Leave A Comment