Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ಅಮೆರಿಕ ಕ್ರಿಕೆಟ್‌ ತಂಡದಲ್ಲಿ ಸಿಂಧೂಜಾ

ಹೈದರಾಬಾದ್‌: ಹೈದರಾಬಾದಿನ 26ರ ಹರೆಯದ ಆಟಗಾರ್ತಿ ಸಿಂಧೂಜಾ ರೆಡ್ಡಿ ಸಾಲ್ಗುಟಿ ಅಮೆರಿಕದ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಮೆರಿಕ ತಂಡ ಮುಂದಿನ ಆಗಸ್ಟ್‌ ನಲ್ಲಿ ಟಿ-20 ವಿಶ್ವಕಪ್‌ ಅರ್ಹತಾ ಪಂದ್ಯಾವಳಿಗಾಗಿ ಅಭ್ಯಾಸ ಆರಂಭಿಸಲಿದೆ.

ಸಿಂಧೂಜಾ ಕೆಲವು ವರ್ಷಗಳ ಹಿಂದೆ ಸಿದ್ಧಾರ್ಥ ರೆಡ್ಡಿ ಅವರನ್ನು ಮದುವೆಯಾಗಿದ್ದರು. ತನಗೆ ವಿವಾಹದ ಬಳಿಕ ಇಂಥದೊಂದು ಅವಕಾಶ ಒದಗಿ ಬಂದಿದ್ದು, ಇದನ್ನು ಎರಡೂ ಕೈಗಳಿಂದ ಬಾಚಿ ಕೊಳ್ಳುವುದಾಗಿ ಸಿಂಧೂಜಾ ಹೇಳಿದ್ದಾರೆ.

ಸಿಂಧೂಜಾ ವಿಕೆಟ್‌ ಕೀಪರ್‌ ಆಗಿದ್ದು, ಆರಂಭಿಕ  ಆಟಗಾರ್ತಿ ಯಾಗಿಯೂ ಸೈ ಎನಿಸಿ ಕೊಂಡಿದ್ದಾರೆ. ಅಮೆ ರಿಕಕ್ಕೆ ತೆರಳಿದ ಬಳಿಕ ಸ್ಥಳೀಯ ಕ್ಲಬ್‌ಗಳ ಪರ ಆಡುತ್ತ ಕ್ರಿಕೆಟ್‌ ನಂಟನ್ನು ಮುಂದುವರಿಸ ತೊಡಗಿದರು. ಸಾಮಾನ್ಯ ವಾಗಿ ಅಮೆರಿಕದ ಕ್ರಿಕೆಟ್‌ ಟ್ರಯಲ್ಸ್‌ಗೆ ಆಯ್ಕೆ ಯಾಗಬೇಕಾದರೆ ಕನಿಷ್ಠ 2 ವರ್ಷಗಳ ಕಾಲ ಆ ದೇಶದಲ್ಲೇ ವಾಸ್ತವ್ಯ ಇರಬೇಕು. ಆದರೆ ಈ ಅವಧಿಯನ್ನು ಪೂರ್ತಿಗೊಳಿಸಲು 3 ತಿಂಗಳಿ ರುವಾಗಲೇ ಸಿಂಧೂಜಾಗೆ ಅಭ್ಯಾಸ ಶಿಬಿರದಲ್ಲಿ ಅವಕಾಶ ಸಿಕ್ಕಿದ್ದೊಂದು ವಿಶೇಷ. ಇಲ್ಲಿ ಅವರು ತಮ್ಮ ಸಾಧನೆ ಮೂಲಕ ಆಯ್ಕೆಗಾರರ ಮೇಲೆ ಪ್ರಭಾವ ಬೀರಿದರು. ಪರಿಣಾಮ, ರಾಷ್ಟ್ರೀಯ ತಂಡಕ್ಕೆ ಆಯ್ಕೆ!

12ರ ಹರೆಯದಲ್ಲೇ ಕ್ರಿಕೆಟ್‌ ಆಡಲಾರಂಭಿಸಿದ ಸಿಂಧೂಜಾಗೆ ವಿಜಯ್‌ ಕುಮಾರ್‌ ಆರಂಭಿಕ ದಿನಗಳ ಕೋಚ್‌ ಆಗಿದ್ದರು. ಬಳಿಕ ಭಾರತ ವನಿತಾ ತಂಡದ ಕೋಚ್‌ ಪೂರ್ಣಿಮಾ ರಾವ್‌ ಅವರ ಮಾರ್ಗದರ್ಶನ ಪಡೆಯಲಾರಂಭಿಸಿದರು. ಹೈದರಾಬಾದ್‌ನ ಅಂಡರ್‌-14, 16, 19 ತಂಡಗಳಲ್ಲಿ ಆಡಿದ ಬಳಿಕ ರಣಜಿ ಟ್ರೋಫಿಯಲ್ಲಿ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸ ತೊಡಗಿದರು. 5 ವರ್ಷಗಳ ಕಾಲ ಸಿಂಧೂಜಾ ರಣಜಿ ತಂಡದಲ್ಲಿದ್ದರು. ಈ ನಡುವೆ ಎಂಜಿನಿಯರ್‌ ವ್ಯಾಸಂಗವನ್ನೂ ಪೂರ್ತಿಗೊಳಿಸಿದರು.

ಅಮೆರಿಕಕ್ಕೆ ತೆರಳಿದ ಬಳಿಕ ಟ್ರಿನಿಡಾಡ್‌ ಹಾಗೂ ಲಂಡನ್ನಿಗೆ ಪ್ರವಾಸಗೈದು 3 ಟಿ-20 ಪಂದ್ಯಗಳನ್ನಾಡಿದರು. ಅಮೆರಿಕ ತಂಡಕ್ಕೆ ಗರಿಷ್ಠ ನೆರವು ನೀಡುವುದು ತನ್ನ ಗುರಿ ಎಂಬುದಾಗಿ ಸಿಂಧೂಜಾ ಹೇಳಿದ್ದಾರೆ.

No Comments

Leave A Comment