Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನಕ್ಕೆ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಮರ್ಥ ಭಾರತ ಇವರ ನೇತೃತ್ವದಲ್ಲಿ ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನವನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿ ಶ್ರೀಕೃಷ್ಣನಿಗೆ ಪ್ರೀತಿಕರವಾದ ಈ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿ ಹಸು ಮತ್ತು ಹಸೆ ಕಾಪಾಡುವವರ ಜೀವನ ಹಸನಾಗುವುದು ಎಂದು ಆಶೀರ್ವಚಿಸಿದರು.

ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಜಗತ್ತಿನಲ್ಲಿ ಉಸಿರಾಟ ಮಾಡುವವರೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಬೇಕೆಂದು ಹರಸಿದರು.ಅತಿಥಿಗಳಾಗಿ ಅದಾನಿ ಗ್ರೂಪ್ಸ್ ನ ಕಿಶೋರ್ ಆಳ್ವ,ಜಿ.ಪ.ಅಧ್ಯಕ್ಷ ದಿನಕರ್ ಬಾಬು, ಎಂ.ಬಿ.ಪುರಾಣಿಕ್ ಮತ್ತು ಕಾರ್ಯಕ್ರಮದ ಸಂಘಟಕ ಟಿ.ಶಂಭು ಶೆಟ್ಟಿ ,ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

No Comments

Leave A Comment