Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

75 ಸ್ತ್ರೀಯರಿಗೆ ವಂಚಿಸಿದ 28ರ ಸ್ತ್ರೀಲೋಲ ಕೊನೆಗೂ ಅರೆಸ್ಟ್‌ !

ಬೆಂಗಳೂರು: ವಿವಿಧ ಹೆಸರುಗಳಲ್ಲಿ 75 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಸ್ತ್ರೀಲೋಲನೊಬ್ಬನನ್ನು ಬೆಂಗಳೂರು ಈಶಾನ್ಯವಲಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ 28 ವರ್ಷದ ಹಾಸನ ಮೂಲದ ಸಾದತ್‌ ಖಾನ್‌ ಎಂಬಾತನಾಗಿದ್ದು, ಈತ ಹಲವು ಯುವತಿಯರಿಗೆ ಮಾನ ಹಾನಿ ಮತ್ತು ಹಣ ಪಡೆದು ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಖಾಸಗಿ ರೆಸಾರ್ಟ್‌ ವೊಂದರಲ್ಲಿ ಟೆಲಿಕಾಲರ್‌ ಆಗಿದ್ದ ಈತ ಅಲ್ಲಿಗೆ ಬಂದ ಮಹಿಳೆಯರ ಸ್ನೇಹ ಸಂಪಾದಿಸಿ ವಂಚಿಸಿದ್ದ. ಮೊದಲು ದೇಹ ಸಂಪರ್ಕ ಹೊಂದಿ ಆ ಬಳಿಕ ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುವುದನ್ನೇ ಈತ ಕಾಯಕವಾಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

17 ವಿವಿಧ ಹೆಸರುಗಳಲ್ಲಿ  ಇಂಟರ್ನೆಟ್‌ನಲ್ಲೂ ಹಲವು ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ ಹಣಕಾಸು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಈತನಿಂದ ವಂಚನೆಗೊಳಾಗದವರು ಧೈರ್ಯವಾಗಿ ಬಂದು ನಮ್ಮಲ್ಲಿ ದೂರು ನೀಡಿ ಎಂದು ಡಿಸಿಪಿ ಡಾ.ಹರ್ಷಾ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರಿ ಹೊಂದಿದ್ದ, ಟೆಕ್ಕಿಗಳು ಮತ್ತು ಕಾರ್ಪೋರೇಟ್‌ ವಲಯದ ಮಹಿಳೆಯರು ಈತನಿಂದ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲೂರು ಪೊಲೀಸರು ಇದೀಗ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment