Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ವಾಕ್ಸಮರ ತೀವ್ರ ಮಹಾಮೈತ್ರಿಯಲ್ಲಿ ಬಿರುಕು: ಆರ್‌ಜೆಡಿ ವಿರುದ್ಧ ಜೆಡಿಯು ಗರಂ

ಪಟ್ನಾ:  ಬಿಹಾರದಲ್ಲಿ ಆಡಳಿತಾರೂಢ ಆರ್‌ಜೆಡಿ ಮತ್ತು ಜೆಡಿಯು ಮೈತ್ರಿಕೂಟದಲ್ಲಿ ಬಿರುಕುಮೂಡುವ ಲಕ್ಷಣ ಗೋಚರಿಸಿದೆ. ಎರಡೂ ಪಕ್ಷಗಳ ನಡುವೆ ನಡೆಯುತ್ತಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.

ನಿತೀಶ್‌ ಕುಮಾರ್‌ ಅವರನ್ನು ಟೀಕಿಸುತ್ತಿರುವ ಪಕ್ಷದ ಮುಖಂಡರನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಜೆಡಿಯು ತಾಕೀತು ಮಾಡಿದೆ. ಇಲ್ಲದಿದ್ದರೆ, ‘ಪರಿಣಾಮ ಎದುರಿಸುವುದಕ್ಕೆ ಸಿದ್ಧರಾಗಿ’ ಎಂದು ಎಚ್ಚರಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ಕಳೆದ ಎರಡು ದಿನಗಳಲ್ಲಿ ಆರ್‌ಜೆಡಿ ಉಪಾಧ್ಯಕ್ಷ ರಘುವಂಶ ಪ್ರಸಾದ್‌ ಸಿಂಗ್‌ ಮತ್ತು ಶಾಸಕ ಭಾಯಿ ಬಿರೇಂದ್ರರ್‌, ನಿತೀಶ್‌ ಅವರನ್ನು ಕಟುವಾಗಿ ಟೀಕಿಸಿದ್ದಾರೆ.
ಲಾಲು ಅವರ ಮಗ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಕೂಡ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.

ನಿತೀಶ್‌ ಕುಮಾರ್‌ ನಿರ್ಧಾರವನ್ನು ಪ್ರಶ್ನಿಸಿರುವ ತೇಜಸ್ವಿ, ‘ಮುಖ್ಯಮಂತ್ರಿಯವರ ಅವಕಾಶವಾದಿತನ ಮತ್ತು  ಅಹಂ ಕೇಂದ್ರಿತ ವರ್ತನೆ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಟೀಕಾ ಪ್ರಹಾರ ನಡೆಸಿದ್ದಾರೆ. ಈ ಹೇಳಿಕೆಗಳಿಂದ ಅಸಮಾಧಾನಗೊಂಡಿರುವ ನಿತೀಶ್‌, ಲಾಲು ಮಗನಿಗೆ ತಿರುಗೇಟು ನೀಡಲು ತಮ್ಮ ವಕ್ತಾರ ಅಜಯ್‌ ಅಲೋಕ್‌ ಅವರನ್ನು ಬಳಸಿಕೊಂಡಿದ್ದಾರೆ.

‘ಕೋವಿಂದ್‌ ವಿಚಾರದಲ್ಲಿ ನಮ್ಮ ನಾಯಕ ನಿತೀಶ್‌ ಕುಮಾರ್‌ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಆದರೆ, ಆರ್‌ಜೆಡಿ ಮುಖಂಡರು ನಿರಂತರವಾಗಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸುವ ಕೆಲಸವನ್ನು ಆರ್‌ಜೆಡಿ ಮುಖ್ಯಸ್ಥರು ಮಾಡಬೇಕು. ಇಲ್ಲದಿದ್ದರೆ, ತಲೆ ಸುಡುವ ಈ ಬೇಸಿಗೆಯಲ್ಲಿ ಅದು ಕಾಳ್ಗಿಚ್ಚಿನಂತೆ ಹಬ್ಬಲಿದೆ’ ಎಂದು ಅಲೋಕ್‌ ತೀಕ್ಷ್ಣವಾಗಿ ಹೇಳಿದ್ದಾರೆ.

No Comments

Leave A Comment