Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಭಾರತ-ಆಫ್ಘನ್ ಸ್ನೇಹದ ಪ್ರತೀಕ ಸಲ್ಮಾ ಡ್ಯಾಂ ಮೇಲೆ ಉಗ್ರರ ದಾಳಿ, 10 ಸೈನಿಕರ ಸಾವು!

ಕಾಬುಲ್: ಆಫ್ಘಾನಿಸ್ತಾನ ಮತ್ತು ಭಾರತ ದೇಶಗಳ ಸ್ನೇಹ-ಸಂಬಂಧದ ಪ್ರತೀಕವಾಗಿರುವ ಸಲ್ಮಾ ಡ್ಯಾಂ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ 10 ಆಫ್ಘನ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ.ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿರುವ ಚಶ್ತ್ ಜಿಲ್ಲೆಯಲ್ಲಿ ಸಲ್ಮಾ ಡ್ಯಾಂನ ಚೆಕ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರ ಗುಂಪು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಡ್ಯಾಂನ ರಕ್ಷಣೆಗೆ ನಿಯೋಜನೆಯಾಗಿದ್ದ ಸೈನಿಕರ  ಪೈಕಿ 10 ಮಂದಿ ಸಾವಿಗೀಡಾಗಿ, ಇತರೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಆಫ್ಘನ್ ಸೈನಿಕರು ನಡೆಸಿದ ಪ್ರತಿ ದಾಳಿ ವೇಳೆ 4  ಮಂದಿ ಉಗ್ರರು ಹತರಾಗಿದ್ದು, ಘಟನಾ ಸ್ಥಳದಲ್ಲಿ ಸೈನಿಕರು ಅವಿತಿರುವ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ 2016ರ ಜೂನ್‌ನಲ್ಲಿ ಜಂಟಿಯಾಗಿ ಸಲ್ಮಾ ಜಲಾಶಯವನ್ನು ಉದ್ಘಾಟಿಸಿದ್ದರು. ಯುದ್ಧದಿಂದ ಜರ್ಜರಿತವಾಗಿದ್ದ ಅಫ್ಘಾನಿಸ್ತಾನದ ಮೂಲಸೌಕರ್ಯದ  ಭಾಗವಾಗಿ ಭಾರತ 1,700 ಕೋಟಿ ರು.ವೆಚ್ಚದ ಯೋಜನೆಯಲ್ಲಿ ಡ್ಯಾಂನ್ನು ನಿರ್ಮಿಸಿತ್ತು. ಈ ಡ್ಯಾಂ ಭಾರತ-ಅಫ್ಘನ್‌ ನ ಸ್ನೇಹದ ಸಂಕೇತವಾಗಿತ್ತು. ಹೆರಾತ್ ಪಟ್ಟಣದಿಂದ 165 ಕಿ.ಮೀ.ದೂರದಲ್ಲಿರುವ ಚಿಸ್ಟ್-ಇ-ಶರೀಫ್ ನದಿಗೆ  ಅಡ್ಡಲಾಗಿ ಕಟ್ಟಿರುವ ಈ ಜಲಾಶಯ 75,000 ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುತ್ತಿದ್ದು, 42 ಮೆಗಾ ವ್ಯಾಟ್ ಜಲ ವಿದ್ಯುತ್‌ ನ್ನು ತಯಾರಿಸಲಾಗುತ್ತಿತ್ತು.

ಇನ್ನು ಇಂದಿನ ದಾಳಿಯಿಂದಾಗಿ ಡ್ಯಾಂಗೆ ಹಾನಿಯಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

No Comments

Leave A Comment