Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್ ಗೆ ಬಿಎಐ 5 ಲಕ್ಷ ನಗದು ಬಹುಮಾನ ಘೋಷಣೆ

ನವದೆಹಲಿ: ಸತತ 2ನೇ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ ಗೆದ್ದ ಭಾರತದ ಕಿಡಾಂಬಿ ಶ್ರೀಕಾಂತ್ ಅವರಿಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.

ಅತ್ತ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಫೈನಲ್ ಪಂದ್ಯದಲ್ಲಿ ಚೀನಾದ ವಿಶ್ವದ 6ನೇ ರ್ಯಾಂಕ್ ನ ಚೆನ್ ಲಾಂಗ್ ರನ್ನು 22-20, 21-16 ಅಂತರದಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ ಮೂಲಕ  ಶ್ರೀಕಾಂತ್ ಸತತ 2ನೇ ಹಾಗೂ, ತಮ್ಮ ವೃತ್ತಿ ಜೀವನದ ನಾಲ್ಕನೇ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಆಂಧ್ರಪ್ರದೇಶದ ಗುಂಟೂರು ಮೂಲದ 24 ವರ್ಷದ ಶಟ್ಲರ್ ಅವರ ಈ ಸಾಧನೆಗೆ ಮೆಚ್ಚಿ ಬ್ಯಾಡ್ಮಿಂಟನ್  ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ ಶ್ರೀಕಾಂತ್ ಅವರಿಗೆ 5 ಲಕ್ಷ ನಗದ ಬಹುಮಾನ ಘೋಷಣೆ ಮಾಡಿದೆ.

ಸ್ವತಃ ಬಿಎಐ ಅಧ್ಯಕ್ಷ ಹಿಮಂತ ಬಿಸ್ವ ಶರ್ಮಾ ಅವರು ಇಂದು ಶ್ರೀಕಾಂತ್ ವರಿಗೆ 5 ಲಕ್ಷ ನಗದು ಬಹುಮಾನವನ್ನು ಘೋಷಣೆ ಮಾಡಿದರು. ಶ್ರೀಕಾಂತ್ ಅವರ ಸಾಧನೆ ನಿಜಕ್ಕೂ ಎಲ್ಲ ಭಾರತೀಯರೂ ಹೆಮ್ಮೆ ಪಡಬೇಕಾದ ಕ್ಷಣವಾಗಿದೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಇಡೀ ವಿಶ್ವವೇ ಇದೀಗ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೊಂದು ಐತಿಹಾಸಿಕ ಗೆಲುವು ಎಂದು ಅವರು ಬಣ್ಣಿಸಿದ್ದಾರೆ.

No Comments

Leave A Comment