Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ಈದ್‌ ಮುನ್ನಾ ದಿನ ಉಗ್ರ ದಾಳಿ: ಪಾಕಿಸ್ಥಾನದ 3 ನಗರಗಳಲ್ಲಿ 65 ಸಾವು

ಇಸ್ಲಾಮಾಬಾದ್‌ : ಪಾಕಿಸ್ಥಾನದ ಮೂರು ಪ್ರಮುಖ ನಗರಗಳಲ್ಲಿ  ಈದ್‌ ಮುನ್ನಾ ದಿನ ನಡೆದಿರುವ ಪ್ರತ್ಯೇಕ ಆತ್ಮಾಹುತಿ ದಾಳಿಗಳಲ್ಲಿ ಒಟ್ಟು 62 ಮಂದಿ ಹತರಾಗಿದ್ದು ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿಯಾಗಿರುವ ಕ್ವೆಟ್ಟಾದಲ್ಲಿನ ಐಜಿಪಿ ಮೆಹಬೂಬ್‌ ಅವರ ಕಾರ್ಯಾಲಯದ ಸಮೀಪ ಆತ್ಮಾಹುತಿ ಬಾಂಬ್‌ ದಾಳಿಕೋರನೋರ್ವ ಸ್ಫೋಟಕಗಳು ತುಂಬಿದ್ದ ಕಾರನ್ನು ಸ್ಫೋಟಿಸಿದಾಗ ಏಳು ಪೊಲೀಸರ ಸಹಿತ ಕನಿಷ್ಠ 13 ಮಂದಿ ಮೃತಪಟ್ಟ 21 ಮಂದಿ ಗಾಯಗೊಂಡರು.

ಈ ಸ್ಫೋಟವನ್ನು ಐಸಿಸ್‌ ಉಗ್ರ ಸಂಘನೆಯೊಂದಿಗೆ ನಂಟು ಹೊಂದಿರುವ ಉಗ್ರ ಸಮೂಹ ಮತ್ತು ತೆಹರೀಕ್‌ ಎ ತಾಲಿಬಾನ್‌ ಉಗ್ರ ಸಂಘಟನೆಯಿಂದ ಸಿಡಿದು ಹೋದ ಸಮೂಹವಾಗಿ ಜಮಾತ್‌ ಉಲ್‌ ಅಹರಾರ್‌ ನಡೆಸಿರುವುದಾಗಿ ಅವುಗಳ ಹೇಳಿಕೆಯಿಂದ ಗೊತ್ತಾಗಿದೆ.

ಇದಾಗಿ ಕೆಲವೇ ತಾಸುಗಳ ಅಂತರದಲ್ಲಿ ಕುರ್ರಂ ಬುಡಕಟ್ಟು ಪ್ರಾಂತ್ಯದಲ್ಲಿನ ಶಿಯಾ ಪ್ರಾಬಲ್ಯದ ಪಾರಾಚಿನಾರ್‌ ನಗರದಲ್ಲಿ ಜನದಟ್ಟನೆಯ ಮಾರುಕಟ್ಟೆಯಲ್ಲಿ ಬೆನ್ನು ಬೆನ್ನಿಗೆ ಎರಡು ಸ್ಫೋಟಗಳು ಸಂಭವಿಸಿದವು. ಪರಿಣಾಮವಾಗಿ ಶಿಯಾಗಳೇ ಹೆಚ್ಚು ಸಂಖ್ಯೆಯಲ್ಲಿರುವಂತೆ 45 ಮಂದಿ ಹತರಾಗಿ ಇತರ 75 ಮಂದಿ ಗಾಯಗೊಂಡರು.

ತೂರಿ ಮಾರುಕಟ್ಟೆಯಲ್ಲಿ ಮೊದಲ ಸ್ಫೋಟ ಸಂಭವಿಸಿತಾದರೆ ಎರಡನೇ ಸ್ಫೋಟ ಬಸ್‌ ನಿಲ್ದಾಣದಲ್ಲಿ ಸಂಭವಿಸಿತು.

No Comments

Leave A Comment