Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಭಾರತೀಯ ಯೋಧರ ತಲೆಕಡಿಯಲು ಬಂದಿದ್ದ ಪಾಕ್ ನ ಬ್ಯಾಟ್ ಉಗ್ರನ ಹತ್ಯೆ!

ಶ್ರೀನಗರ: ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿ ಭಾರತೀಯ ಯೋಧರ ಶಿರಚ್ಛೇದ ಮಾಡಲು ಸಿದ್ಧತೆ ನಡೆಸಿಕೊಂಡು ಬಂದಿದ್ದ ಪಾಕಿಸ್ತಾನಿ ಬ್ಯಾಟ್ ಪಡೆಯ ಉಗ್ರನೋರ್ವನನ್ನು ಭಾರತೀಯ ಯೋಧರು ಗುಂಡಿಕ್ಕಿ ಸೆದೆಬಡಿದಿರುವ ಮಾಹಿತಿ ಬೆಳಕಿಗೆ ಬಂದಿದೆ.

ಆಂಗ್ಲವಾಹಿನಿಯೊಂದು ವರದಿ ಮಾಡಿರುವಂತೆ ಪಾಕಿಸ್ತಾನ ಬಾರ್ಡರ್ ಆ್ಯಕ್ಷನ್ ಟೀಂನ ಸದಸ್ಯ ನೋರ್ವನನ್ನು ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆ ಬಳಿ ಹೊಡೆದುರುಳಿಸಿದ್ದಾರೆ. ಭಾರತೀಯ ಪೋಸ್ಚ್ ನಿಂದ ಕೇವಲ 200 ಮೀಟರ್ ದೂರದಲ್ಲಿ ಪಾಕಿಸ್ತಾನ ಬ್ಯಾಟ್ ಪಡೆಯ  ಯೋಧನನ್ನು ಹೊಡೆದುರುಳಿಸಲಾಗಿದ್ದು, ಮೃತನಿಂದ ಹಲವು ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂತೆಯೇ ಭಾರತೀಯ ಯೋಧರ ಶಿರಚ್ಛೇದವನ್ನು ಚಿತ್ರೀಕರಿಸಲೆಂದು ತಂದಿದ್ದ ಹೆಡ್ ಬ್ಯಾಂಡ್ ಕ್ಯಾಮೆರಾ, ಡ್ರಾಗರ್, ಹರಿತವಾದ  ಚಾಕು, ಎಕೆ 47 ಬಂದೂಕು, ಗ್ರೆನೇಡ್ ಗಳು, 4 ಬುಲೆಟ್ ಗಳ ಕಾರ್ಟಿಡ್ಜ್ ಗಳನ್ನು ಸೈನಿಕರು ವಶಕ್ಕೆ ಪಡೆದಿದ್ದಾರೆ.

ನಿನ್ನೆಯಷ್ಚೇ ಚಕನ್ ದಿ ಬಾಗ್ ಸಮೀಪ ಗಡಿಯೊಳಗೆ ನುಸುಳಲು ಯತ್ನಿಸಿದ್ದ ಆರು ಮಂದಿ ಬ್ಯಾಟ್ ಉಗ್ರರನ್ನು ಭಾರತೀಯ ಸೇನೆ ದಾಳಿ ಮಾಡಿ ತಡೆದಿತ್ತು. ಈ ವೇಳೆ ಇಬ್ಬರು ಹತರಾಗಿದ್ದರು. ಉಳಿದ ನಾಲ್ಕು ಮಂದಿ ಕಾಲ್ಕಿತ್ತಿದ್ದರು. ಇದೀಗ ಈ ಇಬ್ಬರ ಪೈಕಿ ಓರ್ವ ಉಗ್ರನ ಶವ  ದೊರೆತಿದೆ ಎಂದು ಹೇಳಲಾಗುತ್ತಿದೆ. ನಿನ್ನೆಯ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಇಬ್ಬರು ಯೋಧರೂ ಕೂಡ ಹುತಾತ್ಮರಾಗಿದ್ದರು. ನಾಯ್ಕ್ ಜಾದವ್ ಸಂದೀಪ್ ಸರ್ಜೆರಾವ್ ಹಾಗೂ ಸೆಪೋಯ್ ಮಾನೆ ಸಾವನ್ ಬಲ್ಕು ಎಂಬು ಯೋಧರು ಹುತಾತ್ಮರಾಗಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನೆ ಇದು ಖಂಡಿತಾ ಉಗ್ರರ ಕೃತ್ಯವಲ್ಲ. ಇದು ನುರಿತ ತರಬೇತಿ ಪಡೆದ ಪಾಕಿಸ್ತಾನಿ ಯೋಧರ ಕೃತ್ಯವೇ ಎಂದು ಅಭಿಪ್ರಾಯಪಟ್ಟಿದೆ. ಪ್ರಸ್ತುತ ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

No Comments

Leave A Comment