Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಡಾರ್ಜಲಿಂಗ್‌ ಗೋರ್ಖಾ ಹಿಂಸಾಚಾರ: ಕನ್ನಡಿಗ ಬಿಎಸ್‌ಎಫ್ ಯೋಧ ಹುತಾತ್ಮ

ಚಿಕ್ಕಬಳ್ಳಾಪುರ: ಪಶ್ಚಿಮ ಬಂಗಾಳ ಡಾರ್ಜಲಿಂಗ್‌ನಲ್ಲಿ ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ನಿರ್ಮಾಣಕ್ಕೆ ಆಗ್ರಹಿಸಿ  ಗೋರ್ಖಾ ಮುಕ್ತಿ ಮೋರ್ಚಾ ನಡೆಸುತ್ತಿರುವ ಹಿಂಸಾಚಾರದ ವೇಳೆ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಕನ್ನಡಿಗ ಯೋಧ ಹುತಾತ್ಮರಾಗಿದ್ದಾರೆ.

ಶಿಡ್ಲಘಟ್ಟದ ಯಣ್ಣಂಗಾರುವಿನ ಯೋಧ ಗಂಗಾಧರ್‌ ಹುತಾತ್ಮ ಯೋಧನಾಗಿದ್ದು, ಕಳೆದ 20 ವರ್ಷಗಳಿಂದ ಬಿಎಸ್‌ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಗಂಗಾಧರ್‌ಅವರು ಮುನಿಯಪ್ಪ, ಲಕ್ಷ್ಮಮ್ಮ ದಂಪತಿಯ ಪುತ್ರನಾಗಿದ್ದು, ಪತ್ನಿ ಶಿಲ್ಪಾ ಮತ್ತು 10 ವರ್ಷದ ಮಗನನ್ನು ಅಗಲಿದ್ದಾರೆ.

ಇಂದು ಸಂಜೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆಗಳಿವೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

No Comments

Leave A Comment