Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ರಾಷ್ಟ್ರಪತಿ ಚುನಾವಣೆ:  ಕಾಂಗ್ರೆಸ್‌ ರೇಸ್‌ನಲ್ಲಿ ಮೀರಾ ಕುಮಾರ್‌, ಪ್ರಕಾಶ್‌ ಅಂಬೇಡ್ಕರ್‌, ಬೇಜವಾಡ ವಿಲ್ಸನ್‌

ನವದೆಹಲಿ:  ಕರ್ನಾಟಕದ ಮ್ಯಾಗ್ಸೆಸೆ  ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸ್‌ನ್‌,  ಮೀರಾ ಕುಮಾರ್  ಅಥವಾ ಅಂಬೇಡ್ಕರ್  ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್‌ ಪಕ್ಷ ಘೋಷಿಸುವ ಸಾಧ್ಯತೆಗಳಿವೆ.

ರಾಷ್ಟ್ರಪತಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಎನ್‌ಡಿಎ ಮನವಿಯನ್ನು ಕಾಂಗ್ರೆಸ್‌ ಪಕ್ಷ ತಿರಸ್ಕರಿಸಿದೆ.

ಗುರುವಾರದ (ಜೂನ್‌ 22) ಸಮಾನ ಮನಸ್ಕ ಪಕ್ಷಗಳ ಸಭೆಯ ಬಳಿಕ  ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.
ಕೋಲಾರದವರಾದ ಬೇಜವಾಡ ವಿಲ್ಸನ್‌ ಅವರು  ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಟ ನಡೆಸುತ್ತಿದ್ದಾರೆ.

No Comments

Leave A Comment