Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಚೀನ ವಿಮಾನಕ್ಕೆ ಬಲವಾದ ಗಾಳಿ ಹೊಡೆತ : 26 ಮಂದಿಗೆ ಗಾಯ, ಫ್ರ್ಯಾಕ್ಚರ್‌

: ಪ್ಯಾರಿಸ್‌ನಿಂದ ನೈಋತ್ಯ ಚೀನದ ಕುನ್‌ಮಿಂಗ್‌ ನಗರಕ್ಕೆ ಬರುತ್ತಿದ್ದ  ಚೈನಾ ಈಸ್ಟರ್ನ್ ಏರ್‌ಲೈನ್ಸ್‌ನ ವಿಮಾನ ಬಲವಾದ ಗಾಳಿಯ ಹೊಡೆತಕ್ಕೆ ಗುರಿಯಾದ ಪ್ರಯುಕ್ತ ವಿಮಾನ ಪ್ರಯಾಣಿಕರಲ್ಲಿ  ಕನಿಷ್ಠ 26 ಮಂದಿ ಗಾಯಗೊಂಡರು ಮತ್ತು ಈ ಪೈಕಿ ನಾಲ್ಕು ಮಂದಿಯ ಸ್ಥಿತಿ ಗಂಭೀರವಿದೆ ಎಂದು ಚೀನದ ಸರಕಾರಿ ಒಡೆತನದ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನಿನ್ನೆ ಭಾನುವಾರ ಬಲವಾದ ಗಾಳಿಯ ಹೊಡೆತಕ್ಕೆ ಎಂಯು 774 ಹಾರಾಟ ಸಂಖ್ಯೆಯ ವಿಮಾನವು ಗುರಿಯಾದಾಗ ಹಲವು ಪ್ರಯಾಣಿಕರ ತಲೆ ಮೇಲ್ಭಾಗದಲ್ಲಿರುವ ಲಾಕರ್‌ಗೆ ಢಿಕ್ಕಿಯಾಯಿತು; ಇನ್ನು ಕೆಲವು ಪ್ರಯಾಣಿಕರ ತಲೆಯ ಮೇಲೆ ಮೇಲಿಂದ ಬ್ಯಾಗುಗಳು ಉರುಳಿ ಬಿದ್ದವು.

ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ್ದೆವು ಎಂದು ಹೇಳಿರುವ ಚೈನಾ ಈಸ್ಟರ್ನ್ ಏರ್‌ಲೈನ್ಸ್‌, ಪ್ರಯಾಣಿಕರಿಗೆ ಯಾವ ಸ್ವರೂಪದ ಗಾಯಗಳಾಗಿವೆ ಎಂಬುದನ್ನು ತಿಳಿಸಿಲ್ಲ. ಸುಮಾರು 10 ನಿಮಿಷಗಳ ಕಾಲ, ಕನಿಷ್ಠ ಮೂರು ಬಾರಿ ವಿಮಾನವು ಬಲವಾದ ಗಾಳಿಯ ಹೊಡೆತಕ್ಕೆ ಗುರಿಯಾಯಿತು ಎಂದು ಅದು ಹೇಳಿದೆ.

ಏರ್‌ಲೈನ್ಸ್‌ ವಿಮಾನವು ಈ ರೀತಿಯ ಅವಘಡಕ್ಕೆ ಗುರಿಯಾಗಿರುವುದು ವಾರದೊಳಗೆ ಇದು ಎರಡನೇ ಬಾರಿಯಾಗಿದೆ. ಕಳೆದ ಜೂನ್‌ 11ರಂದು ಚೈನಾ ಈಸ್ಟರ್ನ್ ಏರ್‌ಲೈನ್ಸ್‌ನ ವಿಮಾನ ಶಾಂಘೈ ಪ್ರಯಾಣ ಬೆಳೆಸಿದ್ದಾಗ ಅದರ ಇಂಜಿನ್‌ ಒಂದರಲ್ಲಿ ತೂತು ಉಂಟಾಗಿರುವುದು ಪತ್ತೆಯಾಗಿತ್ತು. ಪರಿಣಾಮವಾಗಿ ವಿಮಾನವು ಸಿಡ್ನಿಗೆ ಮರಳಿತ್ತು.

No Comments

Leave A Comment