Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಬಿಹಾರದಲ್ಲಿ ಕಾಮುಕರ ಅಟ್ಟಹಾಸ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲಿನಿಂದ ಹೊರಗೆಸೆದ ದುಷ್ಕರ್ಮಿಗಳು

ಪಾಟ್ನ; ಬಿಹಾರದಲ್ಲಿ ಕಾಮುಕರು ಅಟ್ಟಹಾಸ ಮರೆದಿದ್ದು, 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಅಮಾನುಷ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಯನ್ನು ಮನೆಯಿಂದ ಅಪಹರಿಸಿರುವ 6-7 ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ನಂತರ ಬಾಲಕಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ಪ್ರಜ್ಞೆ ಬಂದಾಗ ರೈಲಿನಲ್ಲಿರುವುದು ಆಕೆಯ ಅರಿವಿಗೆ ಬಂದಿದೆ. ಈ ವೇಳೆ ಅತ್ಯಾಚಾರ ಮಾಡಿದ 6-7 ದುಷ್ಕರ್ಮಿಗಳ ಗುಂಪಿನಲ್ಲಿ ತನ್ನ ನೆರೆಮನೆಯ ಇಬ್ಬರು ವ್ಯಕ್ತಿಗಳಿರುವುದು ಆಕೆಗೆ ತಿಳಿದಿದೆ. ನಂತರ ದುಷ್ಕರ್ಮಿಗಳು ಬಾಲಕಿಯನ್ನು ಚಲಿಸುವ ರೈಲಿನಿಂದ ಕೆಳಗೆ ತಳ್ಳಿದ್ದಾರೆಂದು ಬಾಲಕಿ ಹೇಳಿಕೊಂಡಿದ್ದಾಳೆ.

ಬಾಲಕಿ ಕಿಯುಲ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಆಕೆಗೆ ಗಂಭೀರವಾದ ಗಾಯಗಳಾಗಿವೆ. ಚಲಿಸುವ ರೈಲಿನಿಂದ ಹೊರಗೆಸೆದಿದ್ದರಿಂದಾಗಿ ಮೂಳೆಗಳೂ ಕೂಡ ಮುರಿದಿದ್ದು, ಪಾಟ್ನದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿ ಮೇಲೆ ಅತ್ಯಾಚರವೆಸಗಿರುವುದು ಅಪ್ರಾಪ್ತ ಬಾಲಕರೆಂದು ಹೇಳಲಾಗುತ್ತಿದ್ದು, ಸಂತ್ರಸ್ತರ ಬಾಲಕಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭರವಸೆ ನೀಡಿದ್ದಾರೆ. ಪ್ರಕರಣ ಸಂಬಂಧ ಲಕ್ಕಿಸರಾಯ್ ಡಿಎಸ್’ಪಿ ಪಂಕಜ್ ಕುಮಾರ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಹಿರಿಯ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ.

No Comments

Leave A Comment