Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದ 118ನೇ ಭಜನಾ ಸಪ್ತಾಹದ ಆಮoತ್ರಣ ಪತ್ರಿಕೆ ಬಿಡುಗಡೆ-ಅಗಸ್ಟ್ 16ರಿ೦ದ ಭಜನಾ ಸಪ್ತಾಹ ಆರoಭ

ಉಡುಪಿ:ರಾಷ್ಟ್ರಪತಿಯಿ೦ದ ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶ೦ಕುಸ್ಥಾಪನೆ -ಶ್ರೀಕೃಷ್ಣದರ್ಶನ

ಉಡುಪಿ:ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ನೆರವೇರಿಸಿದರು. ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಕರ್ನಾಟಕ ಸರಕಾರದ ಅರೋಗ್ಯ ಸಚಿವರಾದ ಕೆ.ಆರ್.ರಮೇಶ್, ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೆ.ಜೆ.ಜಾರ್ಜ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್, ಹಾಗೂ ಬೆಂಗಳೂರಿನ ಬಿ.ಆರ್.ಎಸ್ ಹೆಲ್ತ್ & ರಿಸರ್ಚ್ ಇನ್ಸ್ಟಿಟ್ಯೂಟಿನ ಡಾ. ಸಿ.ಆರ್.ಶೆಟ್ಟಿ ಹಾಗೂ ಡಾ.ಬಿ.ಆರ್.ಶೆಟ್ಟಿ ದಂಪತಿಗಳು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಮಠಕ್ಕೆ ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಭೇಟಿ ನೀಡಿದರು. ಇವರನ್ನು ಮಠದ ಮುಖ್ಯ ದ್ವಾರದಲ್ಲಿ ಮಠದ ದಿವಾನರಾದ ರಘುರಾಮ ಆಚಾರ್ಯರು ಹಾರ ಹಾಕಿ ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಿದರು.ನಂತರ ದೇವರ ದರ್ಶನ ಮಾಡಿ, ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಶಾಲು ಹೊದಿಸಿ, ದೇವರ ಪ್ರಸಾದ ನೀಡಿ,ಮಂಟಪದಲ್ಲಿ ಬೆಳ್ಳಿಯ ಕೃಷ್ಣನ ಪ್ರತಿಮೆಯ ಸ್ಮರಣಿಕೆ ಕೊಟ್ಟು ಗೌರವಿಸಿದರು.

ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥಸ್ವಾಮೀಜಿಯವರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥಸ್ವಾಮೀಜಿಯವರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥಸ್ವಾಮೀಜಿಯವರು ಉಪಸ್ಥಿತರಿದ್ದು ರಾಷ್ಟ್ರಪತಿಗಳಿಗೆ ಶಾಲು ಹೊದಿಸಿ ಗೌರವಿಸಿದರು.

ರಾಷ್ಟ್ರಪತಿಗಳೊಂದಿಗೆ ಕರ್ನಾಟಕ ಸರಕಾರದ ಅರೋಗ್ಯ ಸಚಿವರಾದ ಕೆ.ಆರ್.ರಮೇಶ್, ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೆ.ಜೆ.ಜಾರ್ಜ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್, ಹಾಗೂ ಅಬುದಾಬಿ ನ್ಯೂ ಮೆಡಿಕಲ್ ಸೆಂಟರಿನ ಡಾ.ಬಿ.ಆರ್.ಶೆಟ್ಟಿ ದಂಪತಿಗಳು ಆಗಮಿಸಿದ್ದು ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

No Comments

Leave A Comment