Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಮೀನುಗಾರಿಕೆ: ಜಿಎಸ್‌ಟಿ ಕಡಿತ ಮಾಡಿ

ಉಡುಪಿ: ಮೀನುಗಾರಿಕೆಗೆ ಬಳಸುವ ಬಲೆ, ಹಗ್ಗ ಮುಂತಾದ ಸಾಧನಗಳ ಮೇಲೆ ವಿಧಿಸಿರುವ ಶೇ12ರಷ್ಟು ತೆರಿಗೆಯನ್ನು (ಜಿಎಸ್‌ಟಿ) ಹಿಂದಕ್ಕೆ ಪಡೆಯುವಂತೆ ಮಲ್ಪೆ ಮೀನುಗಾರರ ಸಂಘ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ಮೀನುಗಾರಿಕೆ ಕೃಷಿಯ ಇಲಾಖೆಯ ಅಧೀನದಲ್ಲಿದ್ದರೂ ಕೃಷಿಗೆ ಸಿಗುವಷ್ಟು ಸವಲತ್ತು ಮೀನುಗಾರಿಕೆ ಸಿಗುತ್ತಿಲ್ಲ. ಮೀನುಗಾರರಿಗೂ ಕೃಷಿಕರಿಗೆ ನೀಡುವಂತೆ ಹೆಚ್ಚಿನ ಸವಲತ್ತು ನೀಡಬೇಕು. ಮಲ್ಪೆಯಲ್ಲಿ ಮೀನುಗಾರಿಕೆ ಮೂಲ ಭೂತ ಸೌಲಭ್ಯ ಕೇಂದ್ರ ಸ್ಥಾಪನೆ ಮಾಡಿ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಕುಮಟಾದ ತದಡಿಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಸೌಲಭ್ಯ ಕೇಂದ್ರ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಉಡುಪಿಯಲ್ಲಿಯೂ ಅಂತಹುದೇ ಕೇಂದ್ರ ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಸಂಸದೆ ಶೋಭಾ ಕರಾಂದ್ಲಾಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್‌, ಉಡುಪಿ– ದಕ್ಷಿಣ ಕನ್ನಡ ಜಿಲ್ಲೆ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.

ಮೀನು ಒಣಗಿಸುವ ಜಾಗವನ್ನು ಕಳೆದ 39 ವರ್ಷಗಳಿಂದ ಬಳಸಲಾಗುತ್ತಿದ್ದು , ಮಾಸಿಕ ಬಾಡಿಗೆ ನೀಡಲಾಗುತ್ತಿದೆ. ಇದು ಹೊರೆಯಾಗಿರುವುದರಿಂದ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ.
ಮಹಿಳಾ ಮೀನುಗಾರ ಸಂಘ

No Comments

Leave A Comment