Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್: ಇಂಡೋ-ಪಾಕ್ “ಕದನ”ಕ್ಕೆ ಕ್ಷಣಗಣನೆ ಆರಂಭ!

ಲಂಡನ್: ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬರೊಬ್ಬರಿ 32 ವರ್ಷಗಳ ಬಳಿಕ ಏಕದಿನ ಮಾದರಿಯ ಕ್ರಿಕೆಟ್  ಸರಣಿ  ಫೈನಲ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.ಈಗಾಗಲೇ ಲೀಗ್ ಹಂತದ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಫೈನಲ್ ನಲ್ಲಿ ಜಯಿಸುವ ಮೂಲಕ ತನ್ನ ಚೊಚ್ಚಲ ಏಷ್ಯಾಕಪ್ ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾಯುತ್ತಿದ್ದು, ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ  ತನ್ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಅಂತೆಯೇ ಈ ಬಾರಿ ಪ್ರಶಸ್ತಿ ಗೆದ್ದರೆ ಭಾರತ ತಂಡ ಅಗ್ರ ಸ್ಥಾನಕ್ಕೇರಲಿದೆ.

ಇನ್ನು ವಿಶ್ವದಲ್ಲೇ ಬಲಿಷ್ಟ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಖ್ಯಾತಿ ಭಾರತದದ್ದಾರೆ, ಉಭಯ ತಂಡಗಳ ಬೌಲಿಂಗ್ ಬಲಾಬಲ ಸಮಬಲವಾಗಿದೆ. ಅಂತೆಯೇ ಫೀಲ್ಡಿಂಗ್ ಕೂಡ ಉಭಯ ತಂಡಗಳು ಸಮನಾಗಿದ್ದು, ಕಳೆದ  ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯದ ಆರಂಭದಲ್ಲಿ ಭಾರತೀಯ ಫೀಲ್ಡರ್ ಗಳು ಮಾಡಿದ್ದ ಕೆಲ ಯಡವಟ್ಟುಗಳನ್ನು ಸುಧಾರಿಸಿಕೊಂಡರೆ ಖಂಡಿತಾ ಭಾರತ ತಂಡ ಪಾಕಿಸ್ತಾನದ ಮೇಲುಗೈ ಸಾಧಿಸುವುದರಲ್ಲಿ ಎರಡು  ಮಾತಿಲ್ಲ. ಇನ್ನು ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟವಾಡುವ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಹೀಗಾಗಿ ಇಂದೂ ಕೂಡ ಅದೇ ಪ್ರದರ್ಶನವನ್ನು  ನಿರೀಕ್ಷಿಸಲಾಗುತ್ತಿದೆ.

No Comments

Leave A Comment