Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಬಹು ನಿರೀಕ್ಷೆಯ ಕೊಚ್ಚಿ ಮೆಟ್ರೋ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ

ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಕೇರಳದ ಪ್ರಪ್ರಥಮ ಕೊಚ್ಚಿ ಮೆಟ್ರೋ ರೈಲನ್ನು ಉದ್ಘಾಟಿಸಿದರು.

ಬಳಿಕ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಮೆಟ್ರೋ ಮ್ಯಾನ್‌ ಇ ಶ್ರೀಧರನ್‌, ಹಾಗೂ ಇತರ ಕೆಲವು ಮುಖ್ಯ ಅಧಿಕಾರಿಗಳೊಂದಿಗೆ ಉದ್ಘಾಟನಾ ಮೆಟ್ರೋ ಸಂಚಾರದಲ್ಲಿ ಭಾಗಿಯಾಗಿ ಕೇರಳದ ಈ ಚೊಚ್ಚಲ ಸಾಧನೆಯ ಸಂತಸವನ್ನು ಹಂಚಿಕೊಂಡರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕೇರಳ ರಾಜ್ಯಪಾಲ ಪಿ. ಸದಾಶಿವಂ ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ಕುಮ್ಮನಂ ರಾಜಶೇಖರನ್‌ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಸಂದರ್ಭದಲ್ಲಿ ಇದ್ದರು.

ಮೋದಿ ಅವರು ಈ ಬಹು ನಿರೀಕ್ಷೆಯ ಯೋಜನೆಯ ಉದ್ಘಾಟನಾರ್ಥವಾಗಿ ಪಳರಿವಟ್ಟಂ  ಸ್ಟೇಶನ್‌ನಲ್ಲಿ ರಿಬ್ಬನ್‌ ಕತ್ತರಿಸಿ ನೂತನ, ಪ್ರಪ್ರಥಮ ಮಟ್ರೋ ಯಾನಕ್ಕೆ ಚಾಲನೆ ನೀಡಿದರು. ಪಳರಿವಟ್ಟಂ ನಿಂದ ಪಢದಿಪ್ಪಾಲಂ ವರೆಗಿನ ಈ ಮಟ್ರೋ ರೈಲು ಯಾನ ಸೇವೆಯು ಜನರಿಗೆ ತ್ವರಿತ ಸಂಚಾರ ಸೌಕರ್ಯವನ್ನು ಒದಗಿಸುತ್ತದೆ.

ಕೊಚ್ಚಿ ಮೆಟ್ರೋ ರೈಲು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಇದು ಭವಿಷ್ಯದ ಅತ್ಯಾಧುನಿಕ ಮೂಲ ಸೌಕರ್ಯವಾಗಿದ್ದು  ಭಾರತದ ಬೆಳವಣಿಗೆಗೆ ಮಹತ್ತರ ಕಾಣಿಕೆ ನೀಡಲಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಾತನಾಡಿ ಕೊಚ್ಚಿ ಮೆಟ್ರೋ ರೈಲು ಯೋಜನೆಯ ಸಾಕಾರಕ್ಕೆ ಶ್ರಮಿಸಿದ ಎಲ್ಲ ಕೆಲಸಗಾರರಿಗೆ ಕೃತಜ್ಞತೆ ಅರ್ಪಿಸಿದರು.

ಮೋದಿ ಅವರ ಬೆಳಗ್ಗೆ 10.15ಕ್ಕೆ ಇಲ್ಲಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಅವರನ್ನು ರಾಜ್ಯಪಾಲ ಸದಾಶಿವಂ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ವಾಗತಿಸಿದರು.

ಪಳರಿವಟ್ಟಂ ನಿಂದ ಅಳುವಾ ವರೆಗಿನ 13 ಕಿ.ಮೀ. ಉದ್ದದ 11 ಸ್ಟೇಶನ್‌ಗಳನ್ನು ಒಳಗೊಂಡ ಕೊಚ್ಚಿ ಮೆಟ್ರೋ ರೈಲಿನ ಈ ಮೊದಲ ಹಂತವು ಅತೀ ಉದ್ದದ ಭಾಗವಾಗಿ ಉದ್ಘಾಟನೆಗೊಂಡಿದೆ.

No Comments

Leave A Comment