Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರಾಷ್ಟ್ರಪತಿ ನಾಳೆ ಉಡುಪಿ, ಕೊಲ್ಲೂರಿಗೆ

ಉಡುಪಿ: ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಜೂನ್ 18 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಐಎಎಫ್ ವಿಮಾನದಲ್ಲಿ ಆಗಮಿಸುವರು. ಅಲ್ಲಿಂದ ಐಎಎಫ್ ಹೆಲಿಕಾಪ್ಟರ್ ಮುಖಾಂತರ ಆದಿ ಉಡುಪಿಯ ಹೆಲಿಪ್ಯಾಡ್‍ನಲ್ಲಿ 11.25 ಕ್ಕೆ ಇಳಿದು ಬನ್ನಂಜೆ ಸರಕಾರಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು.

ಅಪರಾಹ್ನ 12 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ತೆರಳಿ ಕೃಷ್ಣದರ್ಶನ ಮಾಡುವರು. 12.45 ಕ್ಕೆ ರಾಜಾಂಗಣದಲ್ಲಿ ಬಿಆರ್‍ಎಸ್ ಹೆಲ್ತ್ & ರಿಸರ್ಚ್ ಇನ್ಸ್‍ಟ್ಯೂಟ್‍ನವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 1.30ಕ್ಕೆ ರಾಜಾಂಗಣದಿಂದ ಹೊರಟು 1.40ಕ್ಕೆ ಸರಕಾರಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮಧ್ಯಾಹ್ನ 2.25 ಗಂಟೆಗೆ ಉಡುಪಿ ಪ್ರವಾಸಿ ಮಂದಿರದಿಂದ ಹೊರಟು 3.40ಕ್ಕೆ ಕೊಲ್ಲೂರು ತಲುಪುವರು. 3.40 ರಿಂದ 4.10 ರವರೆಗೆ ಕೊಲ್ಲೂರು ಮೂಕಾಂಬಿಕೆ ದರ್ಶನ, 4.10 ಕ್ಕೆ ಕೊಲ್ಲೂರಿನಿಂದ ಹೊರಟು 5.25 ಕ್ಕೆ ಉಡುಪಿ ಹೆಲಿಪ್ಯಾಡ್‍ಗೆ ಆಗಮಿಸುವರು. 5.30ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳುವರು.

No Comments

Leave A Comment