Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

1993 ಮುಂಬೈ ಸರಣಿ ಸ್ಫೋಟ: ಅಬು ಸಲೇಂ ಸೇರಿ 6 ಮಂದಿ ದೋಷಿಗಳು; ಟಾಡಾ ಕೋರ್ಟ್ ತೀರ್ಪು

ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು 24 ವರ್ಷಗಳ ನಂತರ ಪ್ರಕಟವಾಗಿದ್ದು, ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ಮುಸ್ತಾಫಾ ದೋಸಾ, ಆತನ ಸಹೋದರ ಮೊಹಮ್ಮದ್ ದೋಸಾ, ತಾಹಿರ್ ಮರ್ಚೆಂಟ್, ಅಬು ಸಲೇಂ ಸೇರಿದಂತೆ 6  ಆರೋಪಿಗಳನ್ನು ಮುಂಬೈ ನ ಟಾಡಾ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ಪ್ರಕಟಿಸಿದೆ. ಆರೋಪಿಗಳ ಪೈಕಿ ರಿಯಾಜ್ ಸಿದ್ದಿಕಿಯನ್ನು ಕೋರ್ಟ್ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ್ದು ಖುಲಾಸೆಗೊಳಿಸಿದೆ .

1993 ರ ಮಾರ್ಚ್.12 ರಂದು ನಡೆದಿದ್ದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟಿದ್ದರೆ, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ 27 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯುಂಟಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ತಫಾ ದೋಸಾ, ಮೊಹಮ್ಮದ್ ದೋಸಾ,  ಮೊಹಮ್ಮದ್ ತಾಹಿರ್ ಅಪರಾಧಿಗಳೆಂದು ಮುಂಬೈ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸ್ಫೋಟಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಸಹಕರಿಸಿದ್ದ ಫಿರೋಜ್ ರಶೀದ್ ಖಾನ್   ಸಹ ಅಪರಾಧಿಗಳೆಂದು ನ್ಯಾಯಾಲಯ ಹೇಳಿದೆ.

ಸ್ಫೋಟ ಪ್ರಕರಣದಲ್ಲಿ ಅಬು ಸಲೇಂ ಸಹ ಭಾಗಿಯಾಗಿದ್ದು, 20೦5 ರಲ್ಲಿ ಆತನನ್ನು ಪೋರ್ಚುಗಲ್ ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೋರ್ವ ಆರೋಪಿ ಮುಸ್ತಾಫಾ ದೋಸಾ  ನನ್ನು ಯುಎಇ ಯಿಂದ ಬಂಧಿಸಿ ಕರೆ ತರಲಾಗಿತ್ತು.

No Comments

Leave A Comment