Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಪಾಕ್‌ ಸೇನೆಯಿಂದ ಭಾರೀ ಗುಂಡಿನ ದಾಳಿ; ಭಾರತದಿಂದ ತಕ್ಕ ಉತ್ತರ

ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಇಂದು ಬುಧವಾರ ನಸುಕಿನ 5 ಗಂಟೆಯಿಂದ ಪಾಕ್‌ ಸೇನೆ ಭಾರೀ ದೊಡ್ಡ ರೀತಿಯಲ್ಲಿ  ಶೆಲ್ಲಿಂಗ್‌ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು ಭಾರತೀಯ ಸೇನೆ ಇದಕ್ಕೆ ತಕ್ಕುದಾದ ಉತ್ತರವನ್ನು ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದ ಭೀಂಭರ್‌ ಗಾಲಿ ಸೆಕ್ಟರ್‌ನಲ್ಲಿ ಪಾಕ್‌ ಸೇನೆ ಆಟೋಮ್ಯಾಟಿಕ್‌ ಶಸ್ತ್ರಗಳು, 82 ಎಂಎಂ ಮೋರ್ಟಾರ್‌ಗಳನ್ನು ಬಳಸಿಕೊಂಡು ನಿರಂತರ ದಾಳಿ ನಡೆಸಿತು ಎಂದು ಸೇನಾ ಮೂಲಗಳು ತಿಳಿಸಿವೆ.

ನಿನ್ನೆ ಮಂಗಳವಾರ ಸಂಜೆ ಕಾಶ್ಮೀರದಲ್ಲಿ ನಾಲ್ಕು ತಾಸುಗಳ ಅವಧಿಯಲ್ಲಿ  ಉಗ್ರರು ಸರಣಿ ದಾಳಿಗಳನ್ನು ನಡೆಸಿದ್ದು ಹದಿಮೂರು ಭದ್ರತಾ ಸಿಬಂದಿಗಳು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ದಕ್ಷಿಣ ಕಾಶ್ಮೀರದಲ್ಲಿ ಐದು ದಾಳಿಗಳು ಮತ್ತು ಉತ್ತರ ಕಾಶ್ಮೀರದಲ್ಲಿ ಒಂದು ದಾಳಿ ಸೇರಿದಂತೆ ಒಟ್ಟು ಆರು ದಾಳಿಗಳು ಕಳೆದ 24 ತಾಸುಗಳಲ್ಲಿ ನಡೆದಿವೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್‌ ನಲ್ಲಿ ಉಗ್ರರು ಸಿಆರ್‌ಪಿಎಫ್ ಶಿಬಿರದ ಮೇಲೆ ಗ್ರೆನೇಡ್‌ ಎಸೆದಿದ್ದಾರೆ. ಪರಿಣಾಮವಾಗಿ 9 ಜವಾನರು ಮತ್ತು ಓರ್ವ ಪೊಲೀಸ್‌ ಅಧಿಕಾರಿ ಗಾಯಗೊಂಡರೆಂದು ಮೂಲಗಳು ತಿಳಿಸಿವೆ.

No Comments

Leave A Comment