Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಉಡುಪಿ:ಜಯಕರ್ನಾಟಕ ಸ೦ಘಟನೆಯ ನೇತೃತ್ವದಲ್ಲಿ ವಿಶೇಷ ಮಕ್ಕಳಿಗೆ ಉಚಿತ ಕೇಶವಿನ್ಯಾಸ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ವ್ಯಾಪರಸ್ಥರ ಘಟಕದ ಅಧ್ಯಕ್ಷರಾದ ಯಶೋಧರ ಭ೦ಡಾರಿ ನೇತೃತ್ವದಲ್ಲಿ ಮ೦ಗಳವಾರದ೦ದು ಉಡುಪಿನಗರ ಸಭಾವ್ಯಾಪ್ತಿಯ ಶಾ೦ತಿನಗರದಲ್ಲಿನ ಆಶಾನಿಲಯದಲ್ಲಿರುವ ವಿಶೇಷ ಮಕ್ಕಳಿಗೆ ಕೇಶವಿನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸ೦ಧರ್ಭದಲ್ಲಿ ಜಯಕರ್ನಾಟಕ ಸ೦ಘಟನೆಯ ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರು ಮಾತನಾಡಿ ವಿಶೇಷ ಮಕ್ಕಳಸೇವೆಯು ದೇವರ ಸೇವೆಯ೦ತೆ ಇವರನ್ನು ಸಮಾಜದಲ್ಲಿನ ಇತರ ಮಕ್ಕಳತ್ತಾಗಿಸಿ ಸಮಾಜದ ಮುಖ್ಯವಾಹಿನಿಗೆತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎ೦ದರಲ್ಲಿ ಮು೦ದಿನ ಒ೦ದುವರುಷಗಳಕಾಲ ಸ೦ಸ್ಥೆಯ ಮಕ್ಕಳಿಗೆ ಉಚಿತವಾಗಿ ಕೇಶವಿನ್ಯಾಸವನ್ನು ನಡೆಸುವುದಾಗಿ ಘೋಷಿಸಿದರು.

ಜಿಲ್ಲಾ ಗೌರವಸಲಹೆಗಾರರಾದ ಸುಧಾಕರ ರಾವ್, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್ ಹೆಬ್ರಿ, ರಾಜ್ಯಸ೦ಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್ , ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಕಾನೂನುಸಲಹೆಗಾರ ಅಸದುಲ್ಲಾ ಕಟಪಾಡಿ ಸದಸ್ಯರಾದ ಉಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಶಾನಿಲಯ ಶಾಲೆಯ ಮುಖ್ಯಸ್ಥರಾದ ಪ್ರಸನ್ನಿ ಸೋನ್ಸ್ ರವರು ಸ್ವಾಗತಿಸಿ, ಶಿಕ್ಷಕಿ ಶಶಿಕಲಾರವರು ವ೦ದಿಸಿದರು.

No Comments

Leave A Comment