Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಉಡುಪಿ : ಪ್ಯಾಂಟ್‌ ಕಿಸೆಯಲ್ಲೇ ಮೈಕ್ರೋಮ್ಯಾಕ್ಸ್‌ ಮೊಬೈಲ್‌ ಸ್ಫೋಟ !

ಉಡುಪಿ:ಇಲ್ಲಿನ ಇಂದ್ರಾಳಿಯ ರೈಲ್ವೇ ನಿಲ್ದಾಣದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಿಸೆಯಲ್ಲೇ ಮೊಬೈಲ್‌ ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದೆ.

ಕಟಪಾಡಿಯ ಮಂಜುನಾಥ್‌ ಎನ್ನುವವರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ. 6 ತಿಂಗಳ ಹಿಂದೆ ಖರೀದಿಸಿದ್ದ ಮೈಕ್ರೊಮ್ಯಾಕ್ಸ್‌ ಮೊಬೈಲ್‌ ಇದಾಗಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಿಸೆಯಲ್ಲಿ ಬಿಸಿಯಾದ ಅನುಭವವಾಗಿದ್ದು, ನೋಡನೋಡುತ್ತಿದ್ದಂತೆ ಹೊಗೆ ಬರಲಾರಂಭಿಸಿದ್ದು, ಕೂಡಲೆ ಮೊಬೈಲನ್ನು ರಸ್ತೆಗೆ ಎಸೆದಿದ್ದು ಸ್ಫೋಟಗೊಂಡು ಛಿದ್ರವಾಗಿದೆ.

ಮೊಬೈಲನ್ನು ಶೋರೂಂಗೆ ನೀಡಿದ್ದು, ಬ್ಯಾಟರಿ ಸಮಸ್ಯೆಯಿಂದ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.

No Comments

Leave A Comment