Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಹಳೆ ನೋಟು ಚಲಾವಣೆ ಯಥಾಸ್ಥಿತಿ ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ 500ರ ನೋಟು ಚಲಾವಣೆಗೆ: ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ಹೊಸ 500ರ ನೋಟನ್ನು ಬಿಡುಗಡೆ ಮಾಡುವುದಾಗಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

500 ಮುಖಬೆಲೆ ನೋಟಿನ ಮುಂಭಾಗದಲ್ಲಿ ‘ಎ’ ಸಂಖ್ಯೆಯ ಸರಣಿಯನ್ನು ಒಳಗೊಂಡಿರಲಿದ್ದು, ಹೊಸ ನೋಟು ಹಾಗೂ ಹಳೆಯ ನೋಟಿನ ನಡುವೆ ಸಾಮಾನ್ಯ ಹೋಲಿಕೆ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.

2016ರ ನವೆಂಬರ್‌ 8ರಂದು ಆರ್‌ಬಿಐ  500,  1000 ಮುಖಬೆಲೆ ನೋಟುಗಳನ್ನು ರದ್ದು ಮಾಡಿ. ಹೊಸ  500 ಹಾಗೂ  2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು.

ಭ್ರಷ್ಟಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಕೈಗೊಂಡಿತ್ತು.

ಪ್ರಸುತ್ತ ಚಾಲ್ತಿಯಲ್ಲಿರುವ  500ರ ನೋಟಿನ ಚಲಾವಣೆಯ ಬಗ್ಗೆ ಗೊಂದಲ ಬೇಡ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಹೊಸ 500 ನೋಟಿನ ಲಕ್ಷಣಗಳು: ಮಹಾತ್ಮ ಗಾಂಧಿಯ ಭಾವಚಿತ್ರ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರ ಸಹಿ, ಪ್ರಸಕ್ತ ವರ್ಷ 2017, ಹಾಗೂ ಎರಡೂ ಬದಿ ನೋಟಿನ ಸಂಖ್ಯೆಯ ಆರಂಭದಲ್ಲಿ ‘ಎ’ ಅಕ್ಷರದಿಂದ ಪ್ರಾರಂಭವಾಗುವ ಅಂಶಗಳನ್ನು ಒಳಗೊಂಡ ನೋಟುಗಳನ್ನು ಮುದ್ರಿಸಲಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ.

No Comments

Leave A Comment