Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಗೋಲಿಬಾರ್‌ನಲ್ಲಿ ರೈತರ ಸಾವು ಮಧ್ಯಪ್ರದೇಶ: ರೈತರ ಭೇಟಿಗೆ ಬಂದಿದ್ದ ಹಾರ್ದಿಕ್‌ ಪಟೇಲ್‌ ಬಂಧನ

ನೀಮಚ್‌ (ಮಧ್ಯಪ್ರದೇಶ): ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರ ಗುಂಡೇಟಿಗೆ ರೈತರು ಸಾವಿಗೀಡಾದ ವಾರದ ಬಳಿಕ, ಇಲ್ಲಿನ ರೈತರನ್ನು ಭೇಟಿ ಮಾಡಲು ಬಂದಿದ್ದ ಗುಜರಾತ್‌ನ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ(ಪಿಎಎಸ್‌) ಸಂಚಾಲಕ ಹಾರ್ದಿಕ್‌ ಪಟೇಲ್‌ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸಂಭವಿಸಬಹುದಾದ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೀಮಚ್‌ನ ನಾಯಗಾನ್‌ನಲ್ಲಿ ಹಾರ್ದಿಕ್‌ ಪಟೇಲ್‌ ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಅಭಿಷೇಕ್‌ ದಿವಾನ್‌ ಹೇಳಿದ್ದಾರೆ.

ಜೆಡಿಯುನ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ ಮುಖಂಡ ಅಖಿಲೇಶ್‌ ಕಟಿಯಾರ್‌ ಅವರನ್ನೂ ಬಂಧಿಸಲಾಗಿದೆ. ಬಳಿಕ, ಈ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಪೊಲೀಸ್‌ ವಾಹನದಲ್ಲಿ ಮಧ್ಯಪ್ರದೇಶದಿಂದ ಹೊರಗೆ ಕಳುಹಿಸಲಾಗಿದೆ ಎಂದು ದಿವಾನ್ ಹೇಳಿದ್ದಾರೆ.

ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಐದು ರೈತರು ಸಾವಿಗೀಡಾಗಿದ್ದರು.

ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ರೈತರ ಸಾಲಾಮನ್ನಾ ಘೋಷಣೆ ಮಾಡುವ ಜತೆಗೆ, ಮುಖ್ಯಮಂತ್ರಿ ಉಪವಾಸ ನಡೆಸುವ ಮೂಲಕ ಗಾಂಧಿಗಿರಿ ಅನುಸರಿದ್ದರು.

No Comments

Leave A Comment