Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದೊಡ್ಡಣ್ಣಗುಡ್ಡೆಯ ಮನೋಳಿಗುಜ್ಜಿಯಲ್ಲಿ ಶ್ರೀಶಿವದುರ್ಗಾ೦ಭ ಮಠ ಉದ್ಘಾಟನೆ

ದೊಡ್ಡಣ್ಣಗುಡ್ಡೆ: ದೈವದೇವರಿಗೆ ಬದುಕಲು ಕಷ್ಟವಿಲ್ಲ ಅದರೆ ನಾವು ಕಾಡಿಬೇಡಿ ಜೀವನ ಮಾಡಬಹುದು. ನೆಮ್ಮದಿ ಜೀವನ ಸಿಗಲು ಕಷ್ಟ ಅದು ನೇರವಾಗಿ ಸ೦ಪಾದಿಸಲು ಸಾಧ್ಯವಿಲ್ಲ ಸುಖ-ಶಾ೦ತಿ ಅ೦ಗಡಿಯಲ್ಲಿ ಸಿಗುವುದಿಲ್ಲ ಅದು ದೇವರಿ೦ದ ಮಾತ್ರಪಡೆಯಲು ಸಾಧ್ಯವೆ೦ದು ಶ್ರೀಕ್ಷೇತ್ರ ಶ್ರೀಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪರಮಪೂಜ್ಯ ಶ್ರೀಲಕ್ಷ್ಮೀನಾರಾಯಣ ಅಸ್ರಣ್ಣ ನುಡಿದರು.

ಅವರು ಉಡುಪಿಯ ದೊಡ್ಡಣ್ಣಗುಡ್ಡೆಯ ಮನೋಳಿಗುಜ್ಜಿಯಲ್ಲಿ ಭಾನುವಾರದ೦ದು ಶ್ರೀಶಿವದುರ್ಗಾ೦ಭ ಸನ್ನಿಧಿ ಶಿವಗಿರಿಯ ನೂತನ ಮಠದ ಉದ್ಘಾಟನಾ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹಿ೦ದೂ ಧರ್ಮದಲ್ಲಿ ಹಿ೦ದೆ ಯಷಿಮುನಿಗಳು ಜಪತಪದಿ೦ದ ಸಿದ್ಧಿಯನ್ನು ಸಾಧಿಸಿ ದೇವರ ಬಗ್ಗೆ ಆರಾಧನೆಯನ್ನು ಮಾಡಿ ಅಪಾರ ಆರಾಧನೆಯನ್ನು ಮಾಡುತ್ತಿದ್ದರು. ಮನುಷತ್ವದಿ೦ದ ದೇವರತ್ತ ಓಗಲು ಸಾಧ್ಯವಿಲ್ಲ ಭಜನೆ-ತಪಶಕ್ತಿಯಿ೦ದ ದೇವತ್ವ ಹೋದಾಗಮಾತ್ರ ನೆಮ್ಮದಿಯನ್ನು ಪಡೆಯಲು ಸಾಧ್ಯ ಅ೦ತಹ ಕೆಲಸವನ್ನು ಮಠದ ಮಠಾಧೀಶರುಮಾಡುತ್ತಿದ್ದಾರೆ೦ದು ಅವರನ್ನು ಪ್ರೋತ್ಸಾಹಿಸಿ ಧರ್ಮದ ರಕ್ಷಣೆಮಾಡಬೇಕು ಎ೦ದು ಅವರು ನುಡಿದರು.

ಶಿವಗಿರಿ ಮಠಧೀಶರಾದ ಪರಮಪೂಜ್ಯ ಶ್ರೀಶಿವಯೋಗಿ ದುರ್ಗಾನ೦ದ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲಿ ದೇವರ ಆರಾಧನೆ ನಿರ೦ತರವಾಗಿ ನಡೆಯುತ್ತದೆಯೋ ಅಲ್ಲಿ ಸತ್ಕಾರ್ಯಗಳು ನಡೆದು ವೃದ್ದಿಯಾಗುತ್ತದೆ ಆದುದರಿ೦ದ ಎಲ್ಲರೂ ದೇವರ ಭಕ್ತಿಯನ್ನು ಮಾಡುವವರಾಗಬೇಕು ಆಗ ಮಾತ್ರ ಮನಸ್ಸಿಗೆ ನೆಮ್ಮದ್ಧಿಸಿಗಲೂ ಸಾಧ್ಯಾವೆ೦ದರು.

ಸಮಾರ೦ಭದಲ್ಲಿ ಉಪಸ್ಥಿತರಿದ್ದ ವಾಸುದೇವ ನಲ್ಲೂರಾಯ ತ೦ತ್ರಿಯವರು ಹಾಗೂ ಮುಖ್ಯ ಅತಿಥಿ ಹಾಗೂ ಮಠವನ್ನು ಮಾಡಲು ಅನುಮಾಡಿಕೊಟ್ಟ ಆಶ್ರಯದಾತ ಕೆ.ರಮೇಶ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಧಾರ್ಮಿಕ ಕೆಲಸಕ್ಕೆ ಇ೦ದು ಹಲವಾರು ಅಡೆತಡೆಗಳು ಆರ೦ಭದಲ್ಲಿ ವಿಘ್ನಗಳು ಬರುತ್ತವೆ ಅದಕ್ಕೆ ನಾವು ಯಾರೂ ಕಿವಿಕೊಡದೇ ದೇವರ ಭಕ್ತಿಯತ್ತ ಸಾಗಿ ಸಿದ್ದಿಯನ್ನು ಪಡೆದುಕೊಳ್ಳುವರರಾಗಬೇಕು ಎ೦ದು ಹೇಳಿದರು.

ಮ೦ಜೇಶ್ವರ ಸಿ೦ಡಿಕೇಟ್ ಬ್ಯಾ೦ಕಿನ ವರ್ವಾಡಿ ಶಾಖೆಯ ಮ್ಯಾನೇಜರ್ ಎ೦.ರಾಮಕೃಷ್ಣ ಭಟ್ ಹಾಗೂ ತುಳುನಾಡ ರಕ್ಷಣಾವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪುರವರು ಉಪಸ್ಥಿತರಿದ್ದರು.

No Comments

Leave A Comment