Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಎಲ್ಲ ತುರ್ತು ಸೇವೆಗೆ ಒಂದೇ ಸಂಖ್ಯೆ 100; ‘ನಮ್ಮ 100’ ಸೇವೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಅಮೆರಿಕ ಹಾಗೂ ಲಂಡನ್ ಮಾದರಿಯಲ್ಲಿ ನಗರದ ಜನರು ತುರ್ತು ಸೇವೆಗಾಗಿ ಒಂದೇ ಸಹಾಯವಾಣಿ ಸಂಖ್ಯೆ ಬಳಕೆ ಮಾಡುವ ಮಹತ್ವದ ಯೋಜನೆಗೆ ಶನಿವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಗೃಹ ಸಚಿವಾಲಯ “100” ಸಹಾಯವಾಣಿಯನ್ನು ಚಾಲನೆಗೆ ತಂದಿದೆ. ಈ ನೂತನ ಸಹಾಯವಾಣಿ ಮೂಲಕ ರಾಜ್ಯದ ನಾಗರಿಕರು 100 ಸಂಖ್ಯೆಗೆ ಕರೆ ಮಾಡುವ ಮೂಲಕ ಆ್ಯಂಬುಲೆನ್ಸ್, ಅಗ್ನಿಶಾಮಕ, ಸಂಚಾರ ನಿರ್ವಹಣಾ ಕೇಂದ್ರ, ವನಿತಾ ಸಹಾಯವಾಣಿ, ಹಿರಿಯರ ಸಹಾಯವಾಣಿ, ಮಕ್ಕಳ ಸಹಾಯವಾಣಿ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ.ಅವಘಡ ಸಂಭವಿಸಿದಾಗ ಸದ್ಯ ದೂರು ನೀಡಲು ಜನರು ಸಂಚಾರ ನಿರ್ವಹಣಾ ಕೇಂದ್ರ, ವನಿತಾ ಸಹಾಯವಾಣಿ, ಹಿರಿಯರ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿಗಳ ಪ್ರತ್ಯೇಕ ಸಂಖ್ಯೆಗಳಿಗೆ ಕರೆ ಮಾಡಿ ಸೇವೆ ಪಡೆಯಬೇಕಾದ ಸ್ಥಿತಿಯಿದೆ. ಇದು ಜನರಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ‘ನಮ್ಮ 100’ಗೆ ಜನರು ಕರೆ ಮಾಡಿದರೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಸಂಬಂಧ ಪಟ್ಟ ಸಹಾಯವಾಣಿ ವಿಭಾಗಕ್ಕೆ ಮಾಹಿತಿ ರವಾನೆಯಾಗುತ್ತದೆ. ಬಳಿಕ ಆಯಾ ಸಹಾಯವಾಣಿಯ ಸಿಬ್ಬಂದಿ ದೂರು ನೀಡಿದವರನ್ನು ಸಂಪರ್ಕಿಸಿ, ಸೇವೆ ಒದಗಿಸುತ್ತಾರೆ.ಈ ಮಹತ್ವದ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತುತ ನಮ್ಮ 100 ಯೋಜನೆಯನ್ನು ಕೆಲವೇ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಅಂತೆಯೇ ಪ್ರಸ್ತುತ 5 ಲೈನ್ ಗಳಲ್ಲಿ ನಮ್ಮ 100 ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 100ಕ್ಕೆ ಏರಿಕೆ ಮಾಡುವ ಉದ್ದೇಶವಿದೆ. ರಾಜ್ಯ ಜನರ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಪೊಲೀಸ್ ಇಲಾಖೆ ತಾಂತ್ರಿಕಥೆ ಅಳವಡಿಸಿಕೊಳ್ಳಬೇಕಿದೆ. ಇಲಾಖೆಯ ಆಧುನೀಕರಣಕ್ಕೆ ಅಗತ್ಯವಿರುವಷ್ಟ ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೇವಲ 15 ನಿಮಿಷದಲ್ಲೇ ಸೇವೆ ಲಭ್ಯಇನ್ನು ಪ್ರಸ್ತುತ ಜಾರಿಯಾಗಿರುವ ನಮ್ಮ 100 ತುರ್ತು ಸೇವೆಯಿಂದಾಗಿ ರಾಜ್ಯ ಯಾವ ಮೂಲೆಯಲ್ಲಾದರೂ ಸರಿ ತೊಂದರೆಗೊಳಗಾದ ಪ್ರಜೆಗಳು ಕರೆ ಮಾಡಿದರೆ, ಕೇವಲ 15 ನಿಮಿಷದಲ್ಲಿ ಸೇವೆ ಲಭ್ಯವಾಗುತ್ತದೆ. 100 ಕ್ಕೆ ಕರೆ ಮಾಡಿದರೆ ನಿಯಂತ್ರಣ ಕೊಠಡಿಯಲ್ಲಿರುವ ಸಿಬ್ಬಂದಿ ಕರೆಯನ್ನು ಸಂಬಂಧ ಪಟ್ಟ ತುರ್ತು ಸೇವಾ ವಿಭಾಗಕ್ಕೆ ರವಾನಿಸುತ್ತಾರೆ. ಆಯಾ ವಿಭಾಗದ ಸಿಬ್ಬಂದಿ ಕರೆ ಮಾಡಿದ ವ್ಯಕ್ತಿಯ ವಿವರ ಪಡೆದು ಸಮೀಪದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಾರೆ. ಆ ಮೂಲಕ ಅಧಿಕಾರಿಗಳು ಸಂತ್ರಸ್ತರಿಗೆ ನೆರವಾಗುತ್ತಾರೆ. ಅಂತೆಯೇ ಈ ಬಹು ಉದ್ದೇಶಿತ ಯೋಜನೆ ಫೇಸ್ ಬುಕ್, ವಾಟ್ಸಪ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಲಭ್ಯವಿದ್ದು, ಸೋಷಿಯಲ್ ಮೀಡಿಯಾ ಮೂಲಕವೂ ದೂರು,  ಮಾಹಿತಿ ಮತ್ತು ನೆರವು ಪಡೆಯಬಹುದಾಗಿದೆ.

No Comments

Leave A Comment