Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಜಗಳದಲ್ಲಿ ಗುಟ್ಟು ರಟ್ಟು! ಕನ್ನಡ ನಟಿ ಜೊತೆ ಶಾಸಕ ಇಕ್ಬಾಲ್ 2ನೇ ವಿವಾಹ

ಗಂಗಾವತಿ: ಆಸ್ತಿ ಹಂಚಿಕೆ ವಿವಾದಿಂದ ಗಂಗಾವತಿ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಅವರ ಕುಟುಂಬ ಕಲಹ ಬೀದಿಗೆ ಬಂದಿದ್ದು, ಜೊತೆಗೆ ಅನ್ಸಾರಿ ಅವರು ಸಹೋದರರಿಗೆ ಸೇರಬೇಕಾದ ಆಸ್ತಿಯನ್ನು ತಮ್ಮ 2ನೇ ಪತ್ನಿ ಕನ್ನಡ ನಟಿ ಪಂಚಮಿ ಹೆಸರಿಗೆ ಬರೆದಿರುವುದಾಗಿ ಸಹೋದರರು ಗಂಭೀರವಾಗಿ ಆರೋಪಿಸಿದ್ದಾರೆ.

ಆಸ್ತಿ ವಿವಾದದಿಂದಾಗಿ ಇಕ್ಬಾಲ್ ಅನ್ಸಾರಿ ಅವರು ನಟಿ ಪಂಚಮಿಯನ್ನು 2ನೇ ವಿವಾಹವಾಗಿರುವ ಗುಟ್ಟು ರಟ್ಟಾದಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಸಹೋದರರ ನಡುವೆ ಆಸ್ತಿ ವಿವಾದ ನಡೆದಿತ್ತು.

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿ ಪಂಚಮಿ ಸಿನಿಮಾ, ಧಾರವಾಹಿಗಳ ಮೂಲಕವೂ ಜನಪ್ರಿಯರಾಗಿದ್ದರು. ಇದೀಗ ಇಕ್ಬಾಲ್ ಅನ್ಸಾರಿ ಜೊತೆ ಗುಟ್ಟಾಗಿ ಸಂಬಂಧ ಹೊಂದಿರುವ ವಿಷಯ ಬಯಲಾಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ನಟಿ ಪಂಚಮಿಗೆ ಅನ್ಸಾರಿ ಮನೆ ಮಾಡಿಕೊಟ್ಟಿದ್ದಾರೆ ಎಂದು ವರದಿ ವಿವರಿಸಿದೆ.

ಅನ್ಸಾರಿ ಸಹೋದರ ಅಜರ್ ಅನ್ಸಾರಿ ಹೇಳೋದೇನು?
ನಮ್ಮ ತಂದೆ ತೀರಿಹೋದ ಮೇಲೆ ತಂದೆಯ ಆಸ್ತಿಯಲ್ಲಿ ಮೂರು ಜನರಿಗೆ ಆಸ್ತಿ ಹಂಚಿಕೆಯಾಗಬೇಕಿತ್ತು. ಆದರೆ ಶಾಸಕ ಅನ್ಸಾರಿ ಅವರು ಖಾಲಿ ಪತ್ರದ ಮೇಲೆ ನಮ್ಮ ಸಹಿ ಪಡೆದು ನಮಗೆ ಆಸ್ತಿಯನ್ನು ಕೊಡದೆ ವಂಚಿಸಿದ್ದಾರೆ. 2015ರ ವೇಳೆಗೆ ಅಣ್ಣ ಇಕ್ಬಾಲ್ ಅನ್ಸಾರಿ ಅವರು ನಟಿ ಪಂಚಮಿ ಹೆಸರಿನಲ್ಲಿ ವೈನ್ ಶಾಪ್ ಮಾಡಿದ್ದರು. ಅಲ್ಲದೇ ಆಸ್ತಿಯನ್ನು ಕೂಡಾ 2ನೇ ಪತ್ನಿಯಾದ ಪಂಚಮಿ ಹೆಸರಿಗೆ ಬರೆದಿರುವುದಾಗಿ ಸಹೋದರ ಅಜರ್ ಅನ್ಸಾರಿ ಖಾಸಗಿ ಟಿವಿ ಚಾನೆಲ್ ಜೊತೆ ಮಾತನಾಡುತ್ತ ದೂರಿದ್ದಾರೆ.

No Comments

Leave A Comment