Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಕೊಹ್ಲಿ, ಎಬಿಡಿ ಡಕೌಟ್: ಪಾಕಿಸ್ತಾನಿ ಆ್ಯಂಕರ್ ಜತೆ ಸೆಲ್ಫಿ ಕಾರಣ?

ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ಡಕೌಟ್ ಆಗಿದ್ದರು. ಇದರ ಹಿಂದೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಡಕೌಟ್ ಆಗಿದ್ದು ಇದಕ್ಕೆ ಕಾರಣ ಕೇಳಿದರೆ ನೀವು ದಂಗಾಗುತ್ತೀರಾ.

ಸಾಮಾಜಿಕ ಜಾಲತಾಣಗಳಲ್ಲಿ ಎಬಿಡಿ ಮತ್ತು ಕೊಹ್ಲಿ ಡಕೌಟ್ ಆಗಿರುವ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನ ಟಿವಿ ಆ್ಯಂಕರ್ ಒಬ್ಬಳ ಜತೆಗಿನ ಸೆಲ್ಫಿ ಈ ಇಬ್ಬರು ಆಟಗಾರರು ಡಕೌಟ್ ಆಗಲು ಕಾರಣ ಎಂಬ ಹಾಸ್ಯಸ್ಪದ ಮಾತುಗಳು ಕೇಳಿಬಂದಿದೆ.

ಪಾಕಿಸ್ತಾನದ ಟಿವಿ ನಿರೂಪಕಿ ಝೈನಬ್ ಅಬ್ಬಾಸ್ ಪಾಕಿಸ್ತಾನ-ಆಫ್ರಿಕಾ ಪಂದ್ಯಕ್ಕೂ ಮುನ್ನ ಎಬಿಡಿ ಜತೆ ಸೆಲ್ಫಿ ತೆಗೆದುಕೊಂಡಿದ್ದರು. ಪಂದ್ಯದಲ್ಲಿ ಎಬಿಡಿ ಗೋಲ್ಡನ್ ಡಕೌಟ್ ಆಗಿದ್ದರು. ಇನ್ನು ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಆಕೆ ಕೊಹ್ಲಿ ಜತೆ ಸೆಲ್ಫಿ ತೆಗೆದುಕೊಂಡಿದ್ದರು. ಲಂಕಾ ವಿರುದ್ಧ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರು.

ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಝೈನಬ್ ಅಬ್ಬಾಸ್ ರನ್ನು ಯಾರೂ ಭೇಟಿ ಮಾಡದಂತೆ ಮಾಡಿದ್ದ ಟ್ವೀಟ್ ಅಚ್ಚರಿಗೆ ಕಾರಣವಾಗಿತ್ತು. ಆನಂತರ ಲಂಕಾ ಕ್ರಿಕೆಟ್ ಮಂಡಳಿ ತನ್ನ ಟ್ವೀಟರ್ ಪೇಜ್ ನಿಂದ ಆ ಟ್ವೀಟ್ ಅನ್ನು ತೆಗೆದುಹಾಕಿದೆ.

No Comments

Leave A Comment