Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಅಮಿತಾಗೆ ಹ್ಯಾಪಿ ಟೈಮ್ಸ್‌

ಕನ್ನಡ ಸೇರಿದಂತೆ ಬೇರೆ ಬೇರೆ ಚಿತ್ರರಂಗದಲ್ಲಿ ಕರಾವಳಿ ಮೂಲದ ಸಾಕಷ್ಟು ಮಂದಿ ಇದ್ದಾರೆ. ಅನೇಕರು ಇವತ್ತು ಸ್ಟಾರ್‌ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇದು ಆ ಭಾಗದ ಅನೇಕ ಯುವ ನಟ-ನಟಿಯರಿಗೆ ಪ್ರೇರಣೆ ಎಂದರೆ ತಪ್ಪಲ್ಲ. ಅದೇ ಆಸೆಯೊಂದಿಗೆ ಈಗ ಕರಾವಳಿಯ ಕಡೆಯ ಸಾಕಷ್ಟು ನವಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ ಅಮಿತಾ ಕುಲಾಲ್‌ ಎಂಬ ಮಂಗಳೂರಿನ ಹುಡುಗಿ. ಯಾವ ಅಮಿತಾ ಎಂದರೆ ತೋರಿಸಲು ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಈಗಷ್ಟೇ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತ್ತಿರುವ ನಟಿ. ಸದ್ಯ ಅಮಿತಾ ನಟಿಸಿದ “ಹ್ಯಾಪಿ ಜರ್ನಿ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಸೃಜನ್‌ ಲೋಕೇಶ್‌ ನಾಯಕ. ಅದು ಬಿಟ್ಟರೆ “ಆ ಎರಡು ವರ್ಷಗಳು’ ಎಂಬ ಸಿನಿಮಾದಲ್ಲೂ ಅಮಿತಾ ನಟಿಸಿದ್ದಾರೆ.

ಅಂದಹಾಗೆ, ಅಮಿತಾ ಮಾಡೆಲಿಂಗ್‌ ಕ್ಷೇತ್ರದಿಂದ ಬಂದವರು. ಮುಂಬೈನಲ್ಲಿ ಮಾಡೆಲಿಂಗ್‌ ಮಾಡುತ್ತಿದ್ದ ಅಮಿತಾಗೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ. ಆಗ ಸಿಕ್ಕಿದ್ದೇ “ಹ್ಯಾಪಿ ಜರ್ನಿ’.  ನಿರ್ದೇಶಕರು ಕಳುಹಿಸಿಕೊಟ್ಟ ಡೈಲಾಗ್‌ ಹಾಗೂ ಸನ್ನಿವೇಶವನ್ನು ನಟಿಸಿ, ಅದನ್ನು ವಿಡಿಯೋ ಮಾಡಿ ಕಳುಹಿಸಿದರಂತೆ. ಹುಡುಗಿಯಲ್ಲಿ ಪ್ರತಿಭೆ ಇದೆ ಎಂದು ಗುರುತಿಸಿದ ಶ್ಯಾಮ್‌ ಅವಕಾಶ ನೀಡಿದ್ದಾರೆ. “ನನಗೆ ಸಿಕ್ಕಿರುವ ಎರಡು ಪಾತ್ರಗಳು ಭಿನ್ನವಾಗಿವೆ. “ಹ್ಯಾಪಿ ಜರ್ನಿ’ ಸಿನಿಮಾದಲ್ಲಿ ಬಬ್ಲಿ ಹುಡುಗಿಯ ಪಾತ್ರವಾದರೆ, “ಆ ಎರಡು ವರ್ಷಗಳು’ ಚಿತ್ರದಲ್ಲಿ ಭಿನ್ನವಾದ ಪಾತ್ರ ಸಿಕ್ಕಿದೆ. ಎರಡು ಸಿನಿಮಾಗಳಿಂದಲೂ ನಾನು ಸಾಕಷ್ಟು ಕಲಿತೆ. ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡ ಸಿಕ್ಕ ಖುಷಿ ಇದೆ’ ಎನ್ನುವುದು ಅಮಿತಾ ಮಾತು. ಅಂದಹಾಗೆ, ಅಮಿತಾ ಭರತ ನಾಟ್ಯ ಕಲಿತಿದ್ದಾರೆ.

ಎಲ್ಲಾ ನಟಿಯರಂತೆ ಅಮಿತಾ ಅವರಿಗೂ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಬೇಕೆಂಬ ಆಸೆ ಇದೆ.

No Comments

Leave A Comment