ಅಮೇರಿಕಾದ ನ್ಯೂಜೆರ್ಸಿಯಲ್ಲಿ ನೂತನ ಗರ್ಭಗುಡಿ ಸಹಿತ ಕೃಷ್ಣ ಪ್ರತಿಷ್ಠೆ
ಉಡುಪಿಯ ಶ್ರೀ ಪುತ್ತಿಗೆ ಮಠದ ಶಾಖಾ ಮಠವಾದ ಅಮೇರಿಕಾದ ನ್ಯೂಜೆರ್ಸಿಯ ಎಡಿಸನ್ ಮಹಾನಗರದಲ್ಲಿ ಇರುವ ಶ್ರೀ ಕೃಷ್ಣ ವೃಂದಾವನದಲ್ಲಿ ಉಡುಪಿಯ ಪರ್ಯಾಯ ಪೀಠಧೀಶರಾದ ಪೇಜಾವರ ಶ್ರೀಪಾದರಾದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಹಾಗೂ ಪುತ್ತಿಗೆ ಮಠಧೀಶರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಉಡುಪಿಯ ಕೃಷ್ಣಮಠದಲ್ಲಿ ಪೂಜೆಗೊಂಡು ತಾ-8-6-2017 ಗುರುವಾರದಂದು ಬೆಳಿಗ್ಗೆ 10.10 ಗಂಟೆಗೆ ಪುತ್ತಿಗೆ ಮಠಧೀಶರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ಮುಖ್ಯಪ್ರಾಣದೇವರು ಹಾಗೂ ರಾಘವೇಂದ್ರ ಸ್ವಾಮೀಜಿಯವರ ಮ್ರತ್ತಿಕಾ ವೃಂದಾವನವನ್ನು ಪ್ರತಿಷ್ಠಾಪಿಸಲಾಯಿತು.
ಬೇಲೂರು ಹಳೆಬೀಡು ಶಿಲೆಯ ಅದ್ಭ್ಹುತ ಕೆತ್ತನೆಯ ಆಕಾರಗಳಲ್ಲಿ ಹೊಂದಿರುವ ಕಾಷ್ಠಮಯ ಗರ್ಭಗುಡಿಯಲ್ಲಿ, ತಂತ್ರಸಾರ ಆಗಮ ರೀತಿಯಲ್ಲಿ 1008 ಕಳಶಗಳ ಅಭಿಷೇಕದೊಂದಿಗೆ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದೊಂದಿಗೆ ಬಹಳ ಅದ್ದೂರಿಯಿಂದ ಪ್ರತಿಷ್ಠಾಪನೆಗೊಂಡಿತು.
ಈ ಸಂದರ್ಭದಲ್ಲಿ ಅಮೇರಿಕಾದ ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.ಮದ್ಯಾಹ್ನ ಶ್ರೀಪಾದರಿಂದ ಮಹಾಪೂಜೆಯೊಂದಿಗೆ ನೆರೆದ ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.