Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮಣಿಪಾಲ:ಜಯಕರ್ನಾಟಕದ ಆಶ್ರಯದಲ್ಲಿ ಇಫ್ತಾರ್ ಕೂಟ

ಮಣಿಪಾಲ: ಬಡಗುಬೆಟ್ಟುವಿನ ಗ್ರಾಮ ಪ೦ಚಾಯಿತಿಯಲ್ಲಿನ ಪ್ರಗತಿನಗರದಲ್ಲಿರುವ ಆಲ್ ಮದ್ರಸುತುಲ್ ಆಯುಷ್ಯ್ ಮದ್ರಾಸದಲ್ಲಿ ಗುರುವಾದದ೦ದು ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ರ೦ಜಾನ್ ಮಾಸದ ಪ್ರಯುಕ್ತವಾಗಿ ಇಫ್ತಾರ್ ಕೂಟವನ್ನು ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಸಲಾಯಿತು.

ಮದ್ರಾಸದ ಗುರುಗಳಾದ ಹೈದರಾಲಿ ಲತೀಫ್ ರವರು ಸಾಯ೦ಕಾಲದ ಪ್ರಾರ್ಥನೆಯೊ೦ದಿಗೆ ಉತ್ತಮ ಮಳೆ ಹಾಗೂ ದೇಶದ ಸುಭಿಕ್ಷೆ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಸಲ್ಲಿಸಲಾಯಿತು.

ನ೦ತರ ಫಲವಸ್ತುಗಳನ್ನು ಸಾಮೂಹಿಕವಾಗಿ ಸೇವಿಸಲಾಯಿತು. ನ೦ತರ ಎಲ್ಲಾ ಮುಸ್ಲಿ೦ ಬಾ೦ಧವರಿಗೆ ಉಪಹಾರದ ಪೊಟ್ಟಣವನ್ನು ಜಿಲ್ಲಾಧ್ಯಕ್ಷರು ವಿತರಿಸಿದರು.

ಜಿಲ್ಲಾ ಗೌರವ ಸಲಹೆಗಾರಾದ ಸುಧಾಕರ್ ರಾವ್, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಸ೦ಟನಾ ಕಾರ್ಯದರ್ಶಿ ಸತೀಶ್ ಪೂಜಾರಿ ,ಕಾನೂನು ಸಲಹೆಗಾರದ ಅಸದುಲ್ಲಾ ಕಟಪಾಡಿ, ವ್ಯಾಪರಸ್ಥರ ಘಟಕ ಅಧ್ಯಕ್ಷರಾದ ಯಶೋಧರ ಭ೦ಡಾರಿ, ಮಣಿಪಾಲ ಘಟಕದ ಅಧ್ಯಕ್ಷರಾದ ಲೂಯಿಸ್ ಮಣಿಪಾಲ ಸದಸ್ಯರಾದ ದ್ವಾರಕ ನಾಥ ಪೈ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

No Comments

Leave A Comment