Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಭಾರತಕ್ಕೆ ಎಸ್‌ಸಿಓ ಸದಸ್ಯತ್ವ: ಜಿನ್‌ಪಿಂಗ್‌ – ಮೋದಿ ಭೇಟಿ ಸಂಭವ

ಅಸ್ತಾನಾ : ಕಝಕ್‌ಸ್ಥಾನದ ರಾಜಧಾನಿಯಾಗಿರುವ ಅಸ್ತಾನಾದಲ್ಲಿ ಇಂದು ಗುರುವಾರದಿಂದ ಆರಂಭವಾಗುವ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಭಾರತವನ್ನು  ಎಸ್‌ಸಿಓ ಇದರ ಪೂರ್ಣಮಟ್ಟದ ಸದಸ್ಯ ದೇಶವಾಗಿ ಸೇರಿಸಿಕೊಳ್ಳಲಾಗುವುದು.

ಇದೇ ಸಂದರ್ಭದಲ್ಲಿ ಚೀನದ ಸರ್ವಋತು ಮಿತ್ರ ದೇಶವಾಗಿರುವ ಪಾಕಿಸ್ಥಾನವನ್ನು ಕೂಡ ಎಸ್‌ಸಿಓ ಸಂಘಟನೆಯ ಪೂರ್ಣ ಮಟ್ಟದ ಸದಸ್ಯ ದೇಶವಾಗಿ ಸೇರಿಸಿಕೊಳ್ಳಲಾಗುವುದು.

ಪ್ರಧಾನಿ ನರೇಂದ್ರ ಮೋದಿ ಅವರು ಈಗಿನ್ನು ಶೀಘ್ರವೇ ಕಝಕ್‌ಸ್ಥಾನವನ್ನು ತಲುಪಲಿದ್ದಾರೆ.

 

No Comments

Leave A Comment