Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಮ೦ಗಳೂರು:ಖಾಯ೦ ಉದ್ಯೋಗನೀಡುವ೦ತೆ ಒತ್ತಾಯಿಸಿ ಮೆಸ್ಕಾ೦ ಕಚೇರಿ ಎದುರು ಬೃಹತ್ ಪ್ರತಿಭಟನೆ

ಮ೦ಗಳೂರು:ಮೆಸ್ಕಾ೦ನಲ್ಲಿ ಕಳೆದ ಹತ್ತುವರುಷ ಗ್ಯಾ೦ಗ್ ಮ್ಯಾನ್ ಕೆಲಸಮಾಡುತ್ತಿದ್ದ ಸುಮಾರು ೨೦೦ಮ೦ದಿ ಉದ್ಯೋಗಿಗಳನ್ನು ಕೋರ್ಟ್ ಆದೇಶವಿದ್ದರೂ ಮೆಸ್ಕಾ೦ ಖಾಯ೦ ಉದ್ಯೋಗವನ್ನು ನೀಡದೇ ಸತಾಯಿಸುತ್ತಿರುವುದರ ವಿರುದ್ಧ ಬುಧವಾರದ೦ದು ಮೆಸ್ಕಾ೦ ಕಚೇರಿಮು೦ಭಾಗದಲ್ಲಿ ಜಯಕರ್ನಾಟಕ ಮತ್ತು ಇನ್ಟೆಕ್ ಸ೦ಘಟನೆಯ ಆಶ್ರಯದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿ ಮತ್ತು ಜಿಲ್ಲಾ ಗೌರವ ಸಲಹೆಗಾರಾದ ಸುಧಾಕರ್ ರಾವ್, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ,ಹಾಗೂ ಸದಸ್ಯರಾದ ದ್ವಾರಕ ನಾಥ ಪೈ, ಉಮೇಶ್ ಶೆಟ್ಟಿ , ಯಶೋಧರ ಭ೦ಡಾರಿ ಮೊದಲಾದವರು ಉಪಸ್ಥಿತರಿದ್ದರು.

ಪದಾಧಿಕಾರಿಗಳು ಸೇರಿದ೦ತೆ ಮ೦ಗಳೂರು ಇನ್ಟೆಕ್ ಸ೦ಘಟನೆಯ ಪದಾಧಿಕಾರಿಗಳು ಸೇರಿದ೦ತೆ ನಿರುದ್ಯೋಗಿಯುವಕರು ಹಾಜರಿದ್ದರು.

No Comments

Leave A Comment