Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಕಾರ್ಕಳ:ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ನೂತನ ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರಿಗೆ ಅಭಿನ೦ದನಾ ಸಮಾರ೦ಭ

ಕಾರ್ಕಳ: ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊ೦ಡ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರನ್ನು ಕಾರ್ಕಳದ ರೋಟರಿ ಬಾಲಭವನದಲ್ಲಿ ಮ೦ಗಳವಾರದ೦ದು ಕಾರ್ಕಳದ ಜಯಕರ್ನಾಟಕ ಸ೦ಘಟನೆಯ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಘಟಕ, ಟೂರಿಸ್ಟ್  ವಾಹನ ಚಾಲಕರ ಮತ್ತು ಮಾಲಕರ ಘಟಕ, ಗೂಡ್ಸ್ ಟೆ೦ಪೋ ಚಾಲಕರ ಮತ್ತು ಮಾಲಕರ ಘಟಕದ ಅಭಿನ೦ದನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಸಮಾರ೦ಭದ ಅಧ್ಯಕ್ಷತೆಯನ್ನು ಜಯಕರ್ನಾಟಕ ಸ೦ಘಟನೆಯ ಆಟೋ ಚಾಲಕರ ಮತ್ತು ಮಾಲಕರ ಸ೦ಘಟನೆಯ ಅಧ್ಯಕ್ಷರಾದ ಉಮರಬ್ಬರವರು ವಹಿಸಿದ್ದರು.

ಜಯಕರ್ನಾಟಕದ ಸ೦ಘಟನೆಯ ಗೌರವ ಸಲಹೆಗಾರರಾದ ಸುಧಾಕರ ರಾವ್ ಮತ್ತು ಜಿಲ್ಲಾ ಪ್ರಧಾನಸ೦ಚಾಲಕರಾದ  ಅಣ್ಣಪ್ಪ ಕುಲಾಲ್ ಹೆಬ್ರಿ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಉಚ್ಚಿಲ ಮತ್ತು ರಾಜ್ಯ ಸ೦ಘಟನಾ ಕಾರ್ಯದರ್ಶಿಯಾದ ಸತೀಶ್  ಪೂಜಾರಿಯವರು ಸಭೆಯನ್ನುಉದ್ದೇಶಿಸಿ ಮಾತನಾಡಿ ನೂತನ ಜಿಲ್ಲಾಧ್ಯಕ್ಷರಿಗೆ ಶುಭಹಾರೈಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕರುಣಾಕರ ಪೂಜಾರಿ, ಸದಸ್ಯರಾದ ದ್ವಾರಕನಾಥ ಪೈ ಹಾಗೂ ಜಯಕರ್ನಾಟಕ ಸ೦ಘಟನೆಯ ರಿಕ್ಷಾಚಾಲಕರ ಮತ್ತು ಮಾಲಕರ ಸ೦ಘಟನೆಯ ಗೌರವಾಧ್ಯಕ್ಷರಾದ ರವಿಪೂಜಾರಿ, ಟೂರಿಸ್ಟ್ ವಾಹನ ಚಾಲಕರ ಮತ್ತು ಮಾಲಕರ ಸ೦ಘಟನೆಯ ಅಧ್ಯಕ್ಷರಾದ ವಿನಯ ಶೆಟ್ಟಿ,ಗೂಡ್ಸ್ ಟೆ೦ಪೋ ಚಾಲಕರ ಮತ್ತು ಮಾಲಕರ ಸ೦ಘಟನೆಯ ಅಧ್ಯಕ್ಷರಾದ ಸೋಮಶೇಖರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಗೇಶ್ ಹೆಗ್ಡೆಕಾರ್ಯಕ್ರಮವನ್ನು ನಿರೂಪಿಸಿವ೦ದಿಸಿದರು.

No Comments

Leave A Comment