Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಹೊರಟ್ಟಿಗೆ ಸಭಾಪತಿ ಪಟ್ಟ: ಜೆಡಿಎಸ್‌ ಬೆಂಬಲ?

ಬೆಂಗಳೂರು: ವಿಧಾನಪರಿಷತ್‌ ಹಿರಿಯ ಸದಸ್ಯರಾದ ಜೆಡಿಎಸ್‌ ಪಕ್ಷದ ನಾಯಕ ಬಸವರಾಜ್‌ ಹೊರಟ್ಟಿ ಅವರನ್ನು ಸಭಾಪತಿ ಮಾಡುವ ಷರತ್ತಿಗೊಳಪಟ್ಟು  ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲು ಜೆಡಿಎಸ್‌ ಚಿಂತನೆ ನಡೆಸಿದೆ.

ಕಾಂಗ್ರೆಸ್‌ ಬೆಂಬಲ ಕೇಳುವ ತನಕ ತಟಸ್ಥ ಧೋರಣೆ ಅನುಸರಿಸಲು ಜೆಡಿಎಸ್‌ ನಿರ್ಧರಿಸಿದೆ ಯಾದರೂ ಅವಿಶ್ವಾಸ ಮಂಡನೆಗೆ ಕಾಂಗ್ರೆಸ್‌ ಅಧಿಕೃತವಾಗಿ ಬೆಂಬಲ ಕೇಳಿದಾಗ ತನ್ನ ಪಕ್ಷಕ್ಕೇ ಸಭಾಪತಿ ಸ್ಥಾನ ನೀಡುವುದಾದರೆ ಮಾತ್ರ ಶಂಕರಮೂರ್ತಿ ಪದಚ್ಯುತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂದೇಶವನ್ನು  ಕಾಂಗ್ರೆಸ್‌ಗೆ ರವಾನಿಸಿದೆ ಎಂದು ಹೇಳಲಾಗಿದೆ.  ಈಗ ಕಾಂಗ್ರೆಸ್‌ ತೆಗೆದುಕೊಂಡಿರುವ ನಿಲುವಿನಿಂದ ಜೆಡಿಎಸ್‌ಗೆ ಯಾವುದೇ ರೀತಿಯ ಲಾಭವಿಲ್ಲ. ಈ ಸಂದರ್ಭ ಕಾಂಗ್ರೆಸನ್ನು ಬೆಂಬಲಿಸಿದರೆ, ಬಿಜೆಪಿ ಅದನ್ನೇ ಅಸ್ತ್ರವಾಗಿರಿಸಿಕೊಂಡು ಚುನಾ ವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಲು ಅನುಕೂಲವಾಗಬಹುದು ಎಂಬ ಅಭಿಪ್ರಾಯ ಜೆಡಿಎಸ್‌ ವಲಯದಲ್ಲಿ ಮೂಡಿದೆ ಎನ್ನಲಾಗುತ್ತಿದೆ.

No Comments

Leave A Comment