Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬರೇಲಿಯಲ್ಲಿ ಬಸ್‌-ಟ್ರಕ್‌ ಡಿಕ್ಕಿ: 24 ಮಂದಿ ಸಜೀವ ದಹನ

ಬರೇಲಿ:ಸರ್ಕಾರಿ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನಲ್ಲಿದ್ದ 24 ಮಂದಿ ಸಜೀವದಹನವಾದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ಸೋಮವಾರ ನಡೆದಿದೆ.

ದೆಹಲಿಯಿಂದ ಉತ್ತರಪ್ರದೇಶದ ಗೋಂಡಾಗೆ ಹೊರಟಿದ್ದ ಬಸ್‌ನಲ್ಲಿ 41 ಮಂದಿ ಪ್ರಯಾಣಿಕರಿದ್ದರು. ರಾಷ್ಟ್ರೀಯ ಹೆದ್ದಾರಿ 4ರ ಬಡಾ ಬೈಪಾಸ್‌ ಸಮೀಪದಲ್ಲೇ ಈ ದುರಂತ ಸಂಭವಿಸಿದೆ. ಬಸ್‌ಗೆ ಶಹಜಹಾನ್‌ಪುರದಿಂದ ಬರುತ್ತಿದ್ದ ಟ್ರಕ್‌ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಡೀಸೆಲ್‌ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡಿದೆ. ತತ್‌ಕ್ಷಣವೇ ಬಸ್‌ ಹೊತ್ತಿ ಉರಿಯತೊಡಗಿದ್ದು, ಚಾಲಕ ಸೇರಿದಂತೆ 24 ಮಂದಿ ಸಜೀವ ದಹನವಾಗಿದ್ದಾರೆ. ನಿರ್ವಾಹಕ ಹಾಗೂ ಇತರೆ 14 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳು ಗುರುತು ಹಿಡಿಯ ಲಾಗದಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿವೆ. ಹೀಗಾಗಿ, ಅವುಗಳ ಡಿಎನ್‌ಎ ಪರೀಕ್ಷೆ ನಡೆಸಿದ ಬಳಿಕವೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸ ಲಾಗುವುದು ಎಂದು ಬರೇಲಿ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಶೈಲೇಶ್‌ ರಂಜನ್‌ ತಿಳಿಸಿದ್ದಾರೆ.

ಈ ದುರ್ಘ‌ಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ ರುವ ಪ್ರಧಾನಿ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾ ಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್‌ ಅವರೂ ಇದೇ ಮೊತ್ತದ ಪರಿಹಾರ ಘೋಷಿಸಿದ್ದಾರೆ.

No Comments

Leave A Comment