Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಬೆಳಗಾವಿ ,ಧಾರವಾಡದಲ್ಲಿ ನಡುರಾತ್ರಿ ಭೂಕಂಪನ : ಭಯಭೀತರಾದ ಜನ

ಬೆಳಗಾವಿ : ಶನಿವಾರ ತಡರಾತ್ರಿ ಬೆಳಗಾವಿ,ಧಾರವಾಡ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಭೂಕಂಪನ ಅನುಭವಕ್ಕೆ ಬಂದಿದ್ದು, ರಿಕ್ಟರ್‌ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿತ್ತು ಎಂದು ವರದಿಯಾಗಿದೆ.

ತಡಾರಾತ್ರಿ 11.45 ರ ವೇಳೆಗೆ ಬೆಳಗಾವಿಯ ಹಲವು ಭಾಗಗಳಲ್ಲಿ , 12 ಗಂಟೆಯ ಸುಮಾರಿಗೆ ಧಾರವಾಡದ ಕೆಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿ ಬಂದರು. ಹಲವರು ಸ್ನೇಹಿತರು ಸಂಬಂಧಿಕರಿಗೆ ಫೋನ್‌ ಮಾಡಿ ವಿಚಾರಿಸಿದ್ದು ಎಲ್ಲರೂ ಕಂಗಾಲಾಗಿ ರಾತ್ರಿ ನಿದ್ರೆಯಿಲ್ಲದೆ ಕಳೆಯುವಂತಾಗಿತ್ತು.

ಹಲವೆಡೆ ಗೋಡೆಗಳು ಬಿರುಕು ಬಿಟ್ಟಿದ್ದು, ಅಡುಗೆ ಮನೆಯಲ್ಲಿ ಟ್ಟಿದ್ದ ಪಾತ್ರೆಗಳ ಬಿದ್ದಿರುವ ಬಗ್ಗೆ ವರದಿಯಾಗಿದೆ.

ಭೂಕಂಪನದ ಕೇಂದ್ರ ಬಿಂದು ಮಹಾರಾಷ್ಟ್ರದ ಕೋಯ್ನಾದಲ್ಲಿ ದಾಖಲಾಗಿತ್ತು ಎಂದು ವರದಿಯಾಗಿದೆ.

ಯಾವುದೇ ಹಾನಿಯ ಕುರಿತು ಇದುವರೆಗೆ ವರದಿಯಾಗಿಲ್ಲ.

No Comments

Leave A Comment