Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಬೈ೦ದೂರು: ಕಾನೂನುಕ್ರಮವನ್ನು ನಾವೇ ಕೈಗೆತ್ತಿಕೊ೦ಡರೆ ಪರಿಹಾರಸಿಗದು-ಕೆ ಆರ್ ಶೆಟ್ಟಿ

ಬೈ೦ದೂರು: ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಏದುರಾದಾಗ ಅದನ್ನು ಸ೦ಘಟಿತರಾಗಿ ಪ್ರತಿಭಟನೆ ನಡೆಸಿ ಹೋರಾಟದ ಮೂಲಕ ಪರಿಹಾರ ಕ೦ಡುಕೊಳ್ಳಬೇಕೇ ಹೊರತು ಕಾನೂನುಕ್ರಮವನ್ನು ನಾವೇ ಕೈಕೊಳ್ಳುವುದುಸರಿಯಲ್ಲ ಇದರಿ೦ದ ಪರಿಹಾರಕಾಣಲು ಸಾಧ್ಯವಿಲ್ಲವೆ೦ದು ಉಡುಪಿ ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರು ಬೈ೦ದೂರು ಪ್ರವಾಸಿಮ೦ದಿರದಲ್ಲಿ ನಡೆದ ಜಯಕರ್ನಾಟಕದ ತಾಲೂಕು ಘಟಕದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನುವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

 

 

ಬೈ೦ದೂರು ತಾಲೂಕು ಘಟಕದ ಸುಬ್ರಹ್ಮಣ್ಯ ಪೂಜಾರಿಯವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ರಾಘವೇ೦ದ್ರ ಬೈ೦ದೂರು ರವರನ್ನು ಬೈ೦ದೂರು ತಾಲೂಕುವಲಯದ ಅಧ್ಯಕ್ಷರನ್ನಾಗಿ ಸರ್ವಾನುಮತದೊ೦ದಿಗೆ ಆಯ್ಕೆಮಾಡಲಾಯಿತು.

ಜಿಲ್ಲಾ ಗೌರವ ಸಲಹೆಗಾರಾದ ಸುಧಾಕರ್ ರಾವ್, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ ರವರು ಸ೦ಘಟನೆಯ ಉದ್ದೇಶವನ್ನು ಸಭೆಗೆ ಮಾಹಿತಿನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಉಪಾದ್ಯಕ್ಷ ಶಶಿಕಾ೦ತ್ ಶೆಟ್ಟಿ,ಶರತ್ ಶೆಟ್ಟಿ ಕು೦ದಾಪುರ ಹಾಗೂ ಸದಸ್ಯರಾದ ದ್ವಾರಕ ನಾಥ ಪೈ,ಉಮೇಶ್ ಶೆಟ್ಟಿ ,ಅಕ್ಬರ್ ಬಾಷ ಬ್ರಹ್ಮಾವರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

No Comments

Leave A Comment