Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಕಾಮಾಂಧರ ಅಟ್ಟಹಾಸ: ಅಪಹರಣ,ಗ್ಯಾಂಗ್‌ರೇಪ್‌; 5 ರ ಬಾಲಕಿ ಗಂಭೀರ

ಬೆಂಗಳೂರು: ನಗರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ ನಡೆದಿದ್ದು , 5 ವರ್ಷದ ಬಾಲಕಿಯನ್ನು ಅಪಹರಿಸಿ ಬರ್ಬರವಾಗಿ ಗ್ಯಾಂಗ್‌ ರೇಪ್‌ ಎಸಗಿ ಎಸೆದು ಹೋಗಿರುವ ಹೇಯ ಘಟನೆ ಶುಕ್ರವಾರ ಸಂಜೆ ನಡೆದಿದೆ.

ವೈಯಾಲಿ ಕಾವಲ್‌ ಕ್ರಾಸ್‌ ಬಳಿ ಕಾರಿನಲ್ಲಿ  ಬಂದ ನಾಲ್ವರು ಕಾಮುಕರು ಬಾಲಕಿಯನ್ನು  ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಅತ್ಯಾಚಾರಗೈದಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾಗಿ ಮಾರಣಾಂತಿಕವಾಗಿ ಗಾಯಗೊಂಡು ಅರೆಪ್ರಜ್ಞಾವಸ್ತೆಯಲ್ಲಿದ್ದ ಬಾಲಕಿಯನ್ನು ರಸ್ತೆ ಬದಿ ನಿರ್ದಯವಾಗಿ ಎಸೆದು  ಪರಾರಿಯಾಗಿದ್ದಾರೆ.

ರಸ್ತೆ ಬದಿ ಬಿದ್ದಿದ್ದ ಬಾಲಕಿಯನ್ನು ನೈಟ್‌ ಬೀಟ್‌ ಪೊಲೀಸರು ನೋಡಿ ಕೂಡಲೇ ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿನ ಒಂದು ಕೈಬೆರಳು ತುಂಡಾಗಿದ್ದು , ತಲೆಗೆ ಗಂಭೀರ ಪ್ರಮಾಣದ ಗಾಯವಾಗಿದೆ.

ಬಾಲಕಿಯನ್ನು ಬೌರಿಂಗ್‌ ಅಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೆ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ  ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆಗಿಳಿದಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ಚಿತ್ರದುರ್ಗ ಮೂಲದವರಾಗಿದ್ದು, ಕೂಲಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು ಎಂದು ವರದಿಯಾಗಿದೆ.

ಮನೆಯಿಂದ ಮೂತ್ರ ವಿಸರ್ಜನೆಗೆಂದು ಹೊರ ಬಂದಾಗ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ಸಚಿವ ಕೆ.ಜೆ .ಜಾರ್ಜ್‌ ಭೇಟಿ ನೀಡಿ ಸಂತ್ರಸ್ತ ಬಾಲಕಿಯ ಆರೋಗ್ಯ ವಿಚಾರಿಸಿದರು. ಇದು ಸಮಾಜ ಸಹಿಸಲಾಗದ ಪ್ರಕರಣ ಆರೋಪಿಗಳಿಗೆ ಸಮಾಜವೇ ಒಟ್ಟಾಗಿ ಶಿಕ್ಷೆ ನೀಡಬೇಕು ಎಂದರು. ಶಿಕ್ಷೆಯಿಂದ ಒಂದು ಸಂದೇಶ ರವಾನೆಯಾಗಬೇಕು ಎಂದರು.

No Comments

Leave A Comment