Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಕ್ಷಮಾದಾನ ತಿರಸ್ಕಾರದವರೆಗೆ ಕುಲಭೂಷಣ್ ಜಾಧವ್ ಜೀವಂತವಿರುತ್ತಾರೆ: ಪಾಕ್

ಇಸ್ಲಾಮಾಬಾದ್: ಗೂಢಾಚಾರಿಕೆ ಆರೋಪದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಕ್ಷಮಾದಾನ ತಿರಸ್ಕಾರವಾಗುವವರೆಗೆ ಜೀವಂತವಿರುತ್ತಾರೆ ಎಂದು ಪಾಕಿಸ್ತಾನ ಹೇಳಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಜಾಧವ್ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಹಕ್ಕು ಕಳೆದುಕೊಳ್ಳುವವರೆಗೂ ಸಹ ಜೀವಂತವಿರುತ್ತಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರಾದ ನಫೀಜ್ ಜಕಾರಿಯಾ ಹೇಳಿದ್ದಾರೆ.

ಜಾಧವ್ ಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸುವ ಹಕ್ಕಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ಪಾಕಿಸ್ತಾನದ ಕಾನೂನು ಪ್ರಕ್ರಿಯೆಗಳನ್ನು ಪ್ರಶ್ನಿಸಿ ಮೇಲ್ಮವಿ ಅರ್ಜಿಯನ್ನು ವಿಚಾರಣೆ ನಡೆಸುವ ಕ್ರಿಯೆಯನ್ನು ಐಸಿಜೆ ಮಾಡುವಂತಿಲ್ಲ, ಆದ್ದರಿಂದಲೇ ಭಾರತ ಏನನ್ನು ಕೇಳುತ್ತಿದೆಯೋ ಅದನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಖುರೇಷಿ ಹೇಳಿದ್ದರು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಜ್ ಜಕಾರಿಯಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಭಾರತದ ಪರ ಗೂಢಾಚಾರಿಕೆ ಮಾಡುತ್ತಿರುವ ಆರೋಪದಡಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕ್ ಗಲ್ಲು ಶಿಕ್ಷೆಗೆ ತಡೆ ನೀಡಿದೆ.

No Comments

Leave A Comment