Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಐಎನ್ಎಸ್ ರಾಣಾ ಯುದ್ಧ ನೌಕೆಯಲ್ಲಿ ಯುವ ನಾವಿಕ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣು

ವಿಶಾಖಪಟ್ಟಣಂ: ಐಎನ್ಎಸ್ ರಾಣಾ ಯುದ್ಧ ನೌಕೆಯಲ್ಲಿ ಯುವ ನಾವಿಕ ವಿಕಾಸ್ ಯಾದವ್ ಅವರು ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೈಜಾಗ್ ನ ಈಸ್ಟರ್ನ್ ನೌಲ್ ಕಮಾಂಡ್ (ಇಎನ್ಸಿ)ಯಲ್ಲಿನ ಐಎನ್ಎಸ್ ರಾಣಾ ಯುದ್ಧನೌಕೆಯಲ್ಲಿ ಸೆಂಟ್ರಿ ಕೆಲಸ ಮಾಡುತ್ತಿದ್ದ ವಿಕಾಸ್ ಯಾದವ್ ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುಂಡಿನ ಸದ್ದು ಕೇಳಿದ ಮತ್ತೊಬ್ಬ ನಾವಿಕ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ವಿಕಾಸ್ ಯಾದವ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಐಎನ್ಎಚ್ಎಸ್ ಕಲ್ಯಾಣಿಗೆ ಸಾಗಿಸಿದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮಧ್ಯಪ್ರದೇಶದ ಭಿಂಡ್ ಮೂಲದ 21 ವರ್ಷದ ವಿಕಾಸ್ ಯಾದವ್ ಅವಿವಾಹಿತರಾಗಿದ್ದು, ನೌಕೆಯ ಪವರ್ ಕ್ಲಾಸ್ 1ರಲ್ಲಿ ಎಲೆಕ್ಟ್ರಿಕಲ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಮಲ್ಕಪುರಂ ಪೊಲೀಸರು ಆತ್ಮಹತ್ಯೆ ಹಿಂದಿನ ಕಾರಣ ಪತ್ತೆಗೆ ತನಿಖೆ ಶುರುಮಾಡಿದ್ದಾರೆ.

No Comments

Leave A Comment